ವಿದೇಶದಲ್ಲಿರುವ ಮಲ್ಯರನ್ನು ಭಾರತಕ್ಕೆ ಕರೆತರಲು ಸಮಯ ನಿಗದಿ ಸಾಧ್ಯವಿಲ್ಲ: ವಿಕೆ ಸಿಂಗ್

ವಿದೇಶಕ್ಕೆ ಹಾರಿರುವ ಸಾಲದ ದೊರೆ ವಿಜಯ್ ಮಲ್ಯ ಅವರನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆ ತರಲಾಗುತ್ತದೆ. ಆದರೆ, ಈ ಸಂಬಂಧ ಸಮಯ ನಿಗದಿಗೊಳಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್...
ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್
ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್
Updated on
ಭುವನೇಶ್ವರ್: ವಿದೇಶಕ್ಕೆ ಹಾರಿರುವ ಸಾಲದ ದೊರೆ ವಿಜಯ್ ಮಲ್ಯ ಅವರನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆ ತರಲಾಗುತ್ತದೆ. ಆದರೆ, ಈ ಸಂಬಂಧ ಸಮಯ ನಿಗದಿಗೊಳಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಅವರು ಹೇಳಿದ್ದಾರೆ. 
ಮಲ್ಯ ಪ್ರಕರಣ ಸಂಬಂಧ ಈಗಾಗಲೇ ದಾಖಲೆಗಳನ್ನು ಭಾರತೀಯ ವಿದೇಶಾಂಗ ಸಚಿಚವಾಲಯ ಇಂಗ್ಲೆಂಡ್ ಸರ್ಕಾರಕ್ಕೆ ನೀಡಿದೆ. ಇಂಗ್ಲೆಂಡ್ ಸರ್ಕಾರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಈ ಪ್ರಕ್ರಿಯೆಗೆ ಚಾಲನೆ ದೊರಕಲಿದೆ. ಪ್ರಸ್ತುತ ಮಲ್ಯ ಬ್ರಿಟನ್ ನಲ್ಲಿದ್ದು, ಭಾರತ ಮತ್ತು ಇಂಗ್ಲೆಂಡ್ ನಡುವೆ ಗಡಿಪಾರು ಸಂಬಂಧ ಒಪ್ಪಂದವಾಗಬೇಕಿದೆ. ದಾಖಲೆಗಳ ಪರಿಶೀಲನೆ ಬಳಿಕ ಇಂಗ್ಲೆಂಡ್ ಸರ್ಕಾರ ಅಗತ್ಯವೆನಿಸದರೆ ಮತ್ತಷ್ಟು ವಿವರಣೆಗಳನ್ನು ಕೇಳಬಹುದು. ದಾಖಲೆ ಪರಿಶೀಲನೆ ನಡೆಸಿದ ಬಳಿಕ ಮಲ್ಯ ಅವರನ್ನು ಭಾರತಕ್ಕೆ ಕರೆತರಲಾಗುತ್ತದೆ. ಆದರೆ, ಇದಕ್ಕೆ ಸಮಯವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಂದು ದೇಶದೊಂದಿಗೆ ನಾವು ಗಡಿ ಒಪ್ಪಂದ ಮಾಡಿಕೊಂಡಾಗ, ಒಪ್ಪಂದದಲ್ಲಿ ಸಾಕಷ್ಟು ನಿಯಮಗಳಿರುತ್ತವೆ. ಇಂಗ್ಲೆಂಡ್ ನಲ್ಲಿರುವ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿ ಮಾನ್ಯತೆಯುಳ್ಳ ಪಾಸ್'ಪೋರ್ಟ್ ನೊಂದಿಗೆ ಅವರ ದೇಶಕ್ಕೆ ಹೋದ ನಂತರ ಮತ್ತೆ ನಾವು ಪಾಸ್'ಪೋರ್ಟ್ ನ್ನು ಅಮಾನ್ಯಗೊಳಿಸಿದರೂ ಅಲ್ಲಿನ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಪಾಸ್ ಕೋರ್ಟ್ ನ್ನು ಅಮಾನ್ಯಗೊಳಿಸಿದ ಬಳಿಕ ಇಂಗ್ಲೆಂಡ್ ಸರ್ಕಾರ ನಮ್ಮನ್ನು ದಾಖಲೆಗಳನ್ನು ಕೇಳುತ್ತದೆ. ಪರಿಶೀಲನೆ ಬಳಿಕವಷ್ಟೇ ಗಡಿಪಾರು ಕಿರುತಂತೆ ಚಿಂತಿಸುತ್ತದೆ ಎಂದು ತಿಳಿಸಿದ್ದಾರೆ. 

ಫೆ.8ರಂದು ವಿಜಯ್ ಮಲ್ಯ ಗಡಿಪಾರು ಮಾಡುವಂತೆ ಭಾರತ ಇಂಗ್ಲೆಂಡ್ ಸರ್ಕಾರದ ಬಳಿ ಮನವಿ ಮಾಡಿಕೊಂಡಿತ್ತು. ಇದಕ್ಕಾಗಿ ರಾಜತಾಂತ್ರಿಕವಾಗಿ ಅನೇಕ ದಾಖಲೆಗಳ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ತಿಂಗಳು ಇಂದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಂಡನ್ ಗೆ ಭೇಟಿ ನೀಡಿ ಮಲ್ಯ ಅವರನ್ನು ಗಡಿಪಾರು ಮಾಡುವ ಕುರಿತು ಚರ್ಚೆ ನಡೆಸಿದ್ದರು. ಆದರೆ, ಅವರನ್ನು ಕರೆತರಲು ಅಗತ್ಯವಿರುವ ಕ್ರಮಗಳನ್ನು ಪೂರೈಸಬೇಕಾಗಿರುವುದರಿಂದ ಬರಿ ಕೈಯಲ್ಲಿ ಭಾರತಕ್ಕೆ ಮರಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com