ಭಟ್ಕಳದ ಆರ್ಮರ್'ನನ್ನು ಜಾಗತಿಕ ಉಗ್ರನೆಂದು ಘೋಷಿಸಿದ ಅಮೆರಿಕ

ಕರ್ನಾಟಕದ ಭಟ್ಕಳದ ಮೂಲಕ ಉಗ್ರ ಮೊಹಮ್ಮದ್ ಶಫಿ ಆರ್ಮರ್'ನನ್ನು ಜಾಗತಿಕ ಉಗ್ರನೆಂದು ಅಮೆರಿಕ ಗುರುವಾರ ಘೋಷಿಸಿದೆ...
ಭಟ್ಕಳದ ಮೂಲಕ ಉಗ್ರ ಮೊಹಮ್ಮದ್ ಶಫಿ ಆರ್ಮರ್
ಭಟ್ಕಳದ ಮೂಲಕ ಉಗ್ರ ಮೊಹಮ್ಮದ್ ಶಫಿ ಆರ್ಮರ್
Updated on
ನವದೆಹಲಿ: ಕರ್ನಾಟಕದ ಭಟ್ಕಳದ ಮೂಲಕ ಉಗ್ರ ಮೊಹಮ್ಮದ್ ಶಫಿ ಆರ್ಮರ್'ನನ್ನು ಜಾಗತಿಕ ಉಗ್ರನೆಂದು ಅಮೆರಿಕ ಗುರುವಾರ ಘೋಷಿಸಿದೆ. 
ಅಮೆರಿಕದ ಹಣಕಾಸು ಸಚಿವಾಲಯ ಜಾಗತಿಕ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಗೆ ಭಾರತೀಯ ಯುವಕರನ್ನು ನೇಮಿಸುವ ಕೆಲಸ ಮಾಡುತ್ತಿದ್ದ  ಮಹಮ್ಮದ್ ಶಫಿ ಆರ್ಮರ್'ನನ್ನು ಸೇರ್ಪಡೆಗೊಳಿಸಿದೆ. ಈ ಮೂಲಕ ಆರ್ಮರ್ ನನ್ನು ಜಾಗತಿಕ ಉಗ್ರನೆಂದು ಅಮೆರಿಕ ಘೋಷಣೆ ಮಾಡಿದ್ದು, ಇದರಂತೆ ಉಗ್ರ ಪಟ್ಟಿ ಸೇರಿದ ಮೊದಲ ಭಾರತೀಯ ಎನ್ನಿಸಿಕೊಂಡಿದ್ದಾನೆ. ಈ ಕ್ರಮದಿಂದಾಗಿ ಆತನ ವಿರುದ್ಧ ನಿಷೇಧ ಹೇರುವ ಹಾದಿ ಕೂಡ ಸುಗಮವಾದಂತಾಗಿದೆ. 
ಭಾರತದಲ್ಲಿ ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರ ವಿರುದ್ಧ ಕಾರ್ಯಾಚರಣೆಗಳು ನಡೆದ ಬಳಿಕ, ಆರ್ಮರ್ ತನ್ನ ಸಹೋದರನೊಂದಿಗೆ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. 
ಛೋಟೇ ಮುಲ್ಲಾ, ಅಂಜಾನ್ ಭಾಯ್ ಮತ್ತು ಯೂಸಫ್ ಅಲ್ ಹಿಂದಿ ಮತ್ತಿತರ ಹೆಸರುಗಳನ್ನು ಹೊಂದಿದ್ದ ಆರ್ಮರ್ ವಿರುದ್ಧ ಈ ಹಿಂದೆಯೇ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. 
ಐಎಂ ಸಂಸ್ಥಾಪಕ ರಿಯಾಜ್ ಸೇರಿದಂತೆ ಭಟ್ಕಳ ಸಹೋದರರೊಂದಿಗೆ ಭಿನ್ನಮತದ ಬಳಿಕ, ಆರ್ಮರ್ ಅನ್ಸಾರ್ ಉಲ್ ತೌಹೀದ್ ಸಂಘಟನೆ ಹುಟ್ಟುಹಾಕಿದ್ದ. ಬಳಿಕ ಅದು ಇಸಿಸ್ ಉಗ್ರರಿಗೆ ನಿಷ್ಠೆ ತೋರಿತ್ತು. ತಂತ್ರಜ್ಞಾನದ ಜ್ಞಾನವಿರುವ ಆರ್ಮರ್ ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಭಾರತ, ಬಾಂಗ್ಲಾದೇಶ, ಶ್ರೀಲಂಕಾದ ಯುವಕರನ್ನು ಆಕರ್ಷಿಸಿ ಇಸಿಸ್'ಗೆ ಸೇರ್ಪಡೆಗೊಳಿಸುತ್ತಿದ್ದ. 
2013ರಲ್ಲಿ ನೇಪಾಳ ಗಡಿಯಲ್ಲಿ ಬಂಧಿತನಾಗಿರುವ ಯಾಸಿನ್ ಭಟ್ಕಳ್ ನ ವಿಚಾರಣೆಯಲ್ಲಿ ಆರ್ಮರ್ ಗೆ ಇಸಿಸ್ ಜೊತೆಗೆ ನಂಟಿರುವ ಬಗ್ಗೆ ಸುಳಿವು ನೀಡಿದ್ದ. ಈ ಕುರಿತಂತೆ ರಾಷ್ಟ್ರೀಯ ತನಿಖಾ ದಳ ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲಿ ಸ್ಥಾಪಿಸಿದ್ದ ಇಸಿಸ್ ಘಟಕದ ಮೇಲೆ ದಾಳಿ ನಡೆಸಿತ್ತು. 
ಈ ವೇಳೆ ಆರ್ಮರ್ ಭಾರತದಲ್ಲಿ ಮುಸ್ಲಿಂ ಯುವಕರನ್ನು ಪ್ರೇರೇಪಿಸಿ ಭಯೋತ್ಪಾದನೆಗೆ ಸೆಳೆಯುತ್ತಿರುವ ಅಂಶ ಬೆಳಕಿಗೆ ಬಂದಿತ್ತು. ಜುಂದ್ ಉಲ್ ಖಲೀಫಾ ಎ ಹಿಂದ್ ಹೆಸರಿನಲ್ಲಿ ಅಂತರ್ಜಾಲದ ಮೂಲಕ ಯುವಕರನ್ನು ಭಯೋತ್ಪಾದನೆಗೆ ಸೆಳೆಯುತ್ತಿದ್ದ ಎಂಬ ಮಾಹಿತಿ ಲಭಿಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com