ವಿಮಾನದಲ್ಲೇ ಜನನ: ಜೆಟ್ ಏರ್'ವೇಸ್ ನಿಂದ ಮಗುವಿಗೆ ಬಂಪರ್ ಬಹುಮಾನ!

ಸೌದಿ ಅರೇಬಿಯಾದ ದಮ್ಮಾಮ್ ನಗರದಿಂದ ಕೊಚ್ಚಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನ ಆಕಾಶದಲ್ಲಿ ಹಾರುತ್ತಿರುವಾಗಲೇ ಮಹಿಳೆಯೊಬ್ಬರು ಗಂಡು ಮಗುವಿಗ ಜನ್ಮ ನೀಡಿದ್ದು, ಅದೃಷ್ಟವಂತ ಮಗುವಿಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಸೌದಿ ಅರೇಬಿಯಾದ ದಮ್ಮಾಮ್ ನಗರದಿಂದ ಕೊಚ್ಚಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನ ಆಕಾಶದಲ್ಲಿ ಹಾರುತ್ತಿರುವಾಗಲೇ ಮಹಿಳೆಯೊಬ್ಬರು ಗಂಡು ಮಗುವಿಗ ಜನ್ಮ ನೀಡಿದ್ದು, ಅದೃಷ್ಟವಂತ ಮಗುವಿಗೆ ಜೆಟ್ ಏರ್ ವೇಸ್ ಬಂಪರ್ ಬಹುಮಾನವೊಂದನ್ನು ನೀಡಿದೆ. 
ವಿಮಾನದಲ್ಲಿ ತುಂಬು ಗರ್ಭಿಣಿಯೊಬ್ಬರು ಪ್ರಯಾಣಿಸುತ್ತಿದ್ದರು. ವಿಮಾನ 35 ಸಾವಿರ ಎತ್ತರಕ್ಕೆ ಹೋಗುತ್ತಿದ್ದಂತೆಯೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಮಾನದ ಸಿಬ್ಬಂದಿಗಳ ಸಹಾಯದೊಂದಿಗೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ವಿಮಾನದ ಪೈಲಟ್ ವಿಮಾನವನ್ನು ಕೂಡಲೇ ಕೊಚ್ಚಿಯ ಬದಲು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಿ ತಾಯಿ ಮತ್ತು ಮಗು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗುವಂತೆ ನೋಡಿಕೊಂಡಿದ್ದಾರೆ. 
ಮಹಿಳೆ ಬೆಳಿಗ್ಗೆ 8.45ರ ಸುಮಾರಿಗೆ ಗಗನಸಖಿಯರ ಸಹಾಯದಿಂದ ಮಗುವಿಗೆ ಜನ್ಮ ನೀಡಿದ್ದರು. ವಿಮಾನ ಮುಂಬೈ ನಿಲ್ದಾಣಕ್ಕೆ 9.12ರ ಸುಮಾರಿಗೆ ಬಂದಿಳಿದಿದೆ ಎಂದು ತಿಳಿದುಬಂದಿದೆ. 
ಇದೇ ಮೊದಲ ಬಾರಿಗೆ ಜೆಟ್ ಏರ್ ವೇಸ್ ಸಂಸ್ಥೆಯ ವಿಮಾನದಲ್ಲಿ ಮಗು ಜನಿಸಿದ್ದು, ಹೀಗಾಗಿ ಜೆಟ್ ಏರ್ ವೇಸ್ ಮಗುವಿಗೆ  ಬಂಪರ್ ಬಹುಮಾನವನ್ನು ನೀಡಿದೆ. ಸಂಸ್ಥೆಯ ವಿಮಾನಗಳಲ್ಲಿ ಪ್ರಯಾಣಿಸಲು ಉಚಿತ ಲೈಫ್ ಟೈಮ್ ಪಾಸ್ ನೀಡುವುದಾಗಿ ತಿಳಿಸಿದೆ. ಈ ಪಾಸ್ ನಿಂದ ಮಗು ಜೆಟ್ ಏರ್ ವೇಸ್ ವಿಮಾನದಲ್ಲಿ ಯಾವುದೇ ಸ್ಥಳಕ್ಕೆ ಉಚಿತವಾಗಿ ಪ್ರಯಾಣಿಸಲು ಸಹಾಯಕವಾಗಿರಲಿದೆ. ಪ್ರಸ್ತುತ ತಾಯಿ ಮಗು ಇಬ್ಬರೂ ಮುಂಬೈನ ಹೋಲಿ ಸ್ಪಿರಿಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com