ಅಪಾಯಕಾರಿ ಸ್ಥಳದಲ್ಲಿ ಸೆಲ್ಫೀ ತೆಗೆದರೆ ದಂಡ: ಉತ್ತರಪ್ರದೇಶ ಪೊಲೀಸ್

ಸ್ಮಾರ್ಟ್ ಫೋನ್ ಖರೀದಿ ಹೆಚ್ಚಾಗುತ್ತಿದ್ದಂತೇ ಯುವಕರಲ್ಲಿ ಸೆಲ್ಫೀ ಗೀಳು ಕೂಡ ಹೆಚ್ಚಾಗತೊಡಗಿದ್ದು, ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ನಲ್ಲಿ ಹಲವಾರು ಯುವಕರು ಅಪಾಯದಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೊರಾದಾಬಾದ್: ಸ್ಮಾರ್ಟ್ ಫೋನ್ ಖರೀದಿ ಹೆಚ್ಚಾಗುತ್ತಿದ್ದಂತೇ ಯುವಕರಲ್ಲಿ ಸೆಲ್ಫೀ ಗೀಳು ಕೂಡ ಹೆಚ್ಚಾಗತೊಡಗಿದ್ದು, ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ನಲ್ಲಿ ಹಲವಾರು ಯುವಕರು ಅಪಾಯದಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗತೊಡಗಿವೆ. 
ಈ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಉತ್ತರಪ್ರದೇಶ ಪೊಲೀಸರು ಜೀವಕ್ಕೆ ಅಪಾಯವಿರುವ ಸ್ಥಳಗಳಲ್ಲಿ ಸೆಲ್ಫೀ ಕ್ಲಿಕ್ಕಿಸುವವರಿಗೆ ದಂಡ ಹಾಕಲು ಮುಂದಾಗಿದೆ. 
ಯುವ ಪೀಳಿಗೆಯಲ್ಲಿ ಸೆಲ್ಫೀ ಹುಚ್ಚು ಹೆಚ್ಚಾಗಿದ್ದು, ಇದರ ಪರಿಣಾಮ ಸಾವಿನ ಸಂಖ್ಯೆಗಳು ಹೆಚ್ಚಾಗತೊಡಗಿವೆ. ಇದು ನಿಜಕ್ಕೂ ಉತ್ತಮವಾದ ಬೆಳವಣಿಗೆಯಲ್ಲ. ರೈಲ್ವೇ ಹಳಿಗಳು, ಹೆದ್ದಾರಿ ಹಾಗೂ ಇನ್ನಿತರೆ ಅಪಾಯಕಾರಿ ಸ್ಥಳಗಳಲ್ಲಿ ಯುವಕರು ಸೆಲ್ಫೀ ಕ್ಲಿಕ್ಕಿಸುತ್ತಿದ್ದಾರೆ. ಹೀಗಾಗಿ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆಶೀಶ್ ಶ್ರೀವಾತ್ಸವ್ ಅವರು ಹೇಳಿದ್ದಾರೆ.
ಅಪಾಯಕಾರಿ ಸ್ಥಳಗಳಾದ ಹೆದ್ದಾರಿ, ರೈಲ್ವೇ ಟ್ರಾಕ್, ರೈಲ್ವೇ ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ಬಹು ಎತ್ತರದ ಕಟ್ಟಡಗಳ ಮೇಲೆ ಸೆಲ್ಫೀ ಕ್ಲಿಕ್ಕಿಸುವ ಜನರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಅಪಾಯಕಾರಿ ಸ್ಥಳಗಲ್ಲಿ ಸೆಲ್ಫೀ ಕ್ಲಿಕ್ಕಿಸುವವರಿಗೆ ದಂಡ ಹೇರಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com