ಯೋಗ ದಿನಾಚರಣೆ ಕುರಿತಂತೆ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ
ಯೋಗ ದಿನಾಚರಣೆ ಕುರಿತಂತೆ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ

ಅಂತರಾಷ್ಟ್ರೀಯ ಯೋಗ ದಿನಾಚರಣೆ: ಸಾವಿರಾರು ಜನರ ಜೊತೆ ಪ್ರಧಾನಿ ಮೋದಿ ಯೋಗಾಭ್ಯಾಸ

ದೇಶದಾದ್ಯಂತ ಬುಧವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಯೋಗ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ...
Published on

ಲಖನೌ: ದೇಶದಾದ್ಯಂತ ಬುಧವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಯೋಗ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾವಿರಾರು ಜನರ ಜೊತೆ ಲಖನೌದಲ್ಲಿ ಯೋಗಾಭ್ಯಾಸ ಮಾಡಿದರು. 

ಲಖನೌದ ರಮಾಭಾಯ್ ಅಂಬೇಡ್ಕರ್ ನಗರದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಯೋಗಾಭ್ಯಾಸ ಮಾಡಿದರು. 

ಬೆಳಿಗ್ಗೆ 6.30ರ ಸುಮಾರಿಗೆ ಆಗಮಿಸಿದ ಸಾವಿರಾರು ಜನರು ವಂದೇ ಮಾತರಂ ಘೋಷಣೆಯೊಂದಿಗೆ ಮಳೆಯ ನಡುವೆಯೂ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

ಯೋಗ ದಿನಾಚರಣೆ ಹಿನ್ನಲೆಯಲ್ಲಿ ಜನತೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿಯವರು ಅಂತರಾಷ್ಟ್ರೀಯ ಯೋಗ ದಿನಾಚರಣೆ 2017ಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಹಾಗೂ ಇಡೀ ವಿಶ್ವದ ಜನತೆಗೆ ಈ ಮೂಲಕ ಶುಭಾಶಯಗಳನ್ನು ಹೇಳುತ್ತಿದ್ದೇನೆ. ಯೋಗ ಇಂದು ವಿಶ್ವವನ್ನು ಒಗ್ಗೂಡಿಸುವಲ್ಲಿ ಅತ್ಯಂತ ಮುಖ್ಯ ಪಾತ್ರವಹಿಸಿದೆ ಎಂದು ಹೇಳಿದ್ದಾರೆ. 
ಕಳೆದ ಮೂರು ವರ್ಷಗಳಿಂದ ಸಾಕಷ್ಟು ಯೋಗ ಸಂಸ್ಥೆಗಳು ಆರಂಭಗೊಂಡಿವೆ. ಇದು ನನಗೆ ಸಾಕಷ್ಟು ಸಂತಸವನ್ನು ತಂದಿದೆ. ಯೋಗ ಶಿಕ್ಷಕರ ಬೇಡಿಕೆಗಳು ಕೂಡ ಹೆಚ್ಚಾಗಿದೆ. ಆರೋಗ್ಯ ಹಾಗೂ ಶಕ್ತಿ-ಯುಕ್ತಿಯಿಂದ ಇರುವುದು ಅತ್ಯಂತ ಪ್ರಮುಖವಾದದ್ದು. ಉತ್ತಮ ಆರೋಗ್ಯ ಸಾಧಿಸಲು ಯೋಗ ಉತ್ತಮವಾದ ದಾರಿಯಾಗಿದೆ ಎಂದು ತಿಳಿಸಿದ್ದಾರೆ. 

ನಂತರ ಮಾತನಾಡಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮಳೆಯ ನಡುವೆಯೂ ತಾಳ್ಮೆಯಿಂದ ಕೆಲಸ ಮಾಡುತ್ತಿರುವ ಸ್ವಯಂ ಸೇವಕರಿಗೆ ಧನ್ಯವಾದಗಳು. ಯೋಗ ಜೀವನದ ಕಲೆಯಾಗಿದೆ. ಒಗ್ಗಟ್ಟಿನ ಮಂತ್ರವನ್ನು ಯೋಗ ಹೇಳಿಕೊಡುತ್ತದೆ. ಯೋಗ ನಮ್ಮ ಸಂಸ್ಕೃತಿ ಭಾಗವಾಹಿದ್ದು, ಒಗ್ಗಟ್ಟಿನಿಂದ ಇರುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. 

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆ, ಸರ್ಕಾರೇತರ ಸಂಸ್ಥೆಗಳು, ಯೋಗ ಗುರುಗಳು ಮಳೆಯ ನಡುವೆಯೂ ಸುಮಾರು 80 ನಿಮಿಷಗಳ ಕಾಲ ಯೋಗಾಭ್ಯಾಸವನ್ನು ಮಾಡಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com