ಅರ್ಜಿ ಸಂಬಂಧ ವಿಚಾರಣೆ ಆರಂಭವಾದ ಬಳಿಕ ಕರ್ಣನ್ ಪರ ವಕೀಲರಾದ ನೆಡುಂಪರ ಅವರು ವಾದ ಮಂಡಿಸಿದರು. ಕರ್ಣನ್ ಅವರಿಗೆ ನೀಡಲಾಗಿರುವ 6 ತಿಂಗಳ ಜೈಲು ಶಿಕ್ಷೆಯನ್ನು ಅಮಾನತು ಮಾಡುವಂತೆ ಹಾಗೂ ಜಾಮೀನು ನೀಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡರು. 7 ನ್ಯಾಯಾಧೀಶರಿದ್ದ ಪೀಠ ಆದೇಶವನ್ನು ನೀಡಿದ್ದು, ಆದೇಶ ಎಲ್ಲರೂ ತಲೆ ಬಾಗುವಂತೆ ಮಾಡಿದೆ ಎಂದು ತಿಳಿಸಿದರು. ವಾದಗಳನ್ನು ಆಲಿಸಿದ ನ್ಯಾಯಾಲಯ, ಕರ್ಣನ್ ಅವರಿಗೆ ಯಾವುದೇ ರೀತಿಯ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.