ಗಡಿ ಅತಿಕ್ರಮ ಆರೋಪ: ನಾಥು ಲಾ ಪಾಸ್‌ ಗೆ ಪ್ರವೇಶ ನಿರ್ಬಂಧಿಸಿದ ಚೀನಾ

ಭಾರತ ತನ್ನ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿದೆ ಎಂದು ಆರೋಪಿಸಿರುವ ಚೀನಾ, ಮಾನಸ ಸರೋವರಕ್ಕೆ ಸಂಪರ್ಕ ಕಲ್ಪಿಸುವ ನಾಥು ಲಾ ಪಾಸ್ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.
ನಾಥು ಲಾ
ನಾಥು ಲಾ
ನವದೆಹಲಿ: ಭಾರತ ತನ್ನ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿದೆ ಎಂದು ಆರೋಪಿಸಿರುವ ಚೀನಾ, ಮಾನಸ ಸರೋವರಕ್ಕೆ ಸಂಪರ್ಕ ಕಲ್ಪಿಸುವ ನಾಥು ಲಾ ಪಾಸ್ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. 
ಗಡಿ ಅತಿಕ್ರಮವಾಗಿರುವುದರಿಂದ  ಮಾನಸ ಸರೋವರಕ್ಕೆ ಪ್ರವಾಸ ಕೈಗೊಳ್ಳುವ ಭಾರತೀಯ ಯಾತ್ರಾರ್ಥಿಗಳಿಗೆ ಸಂಪರ್ಕ ಕಲ್ಪಿಸುವ ನಾಥು ಲಾ ಪಾಸ್ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದಾಗಿ ಚೀನಾದ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ. 
ಭಾರತೀಯ ಗಡಿ ಭದ್ರತಾ ಸಿಬ್ಬಂದಿಗಳು ಸಿಕ್ಕೀಂ ಮೂಲಕ ಚಿನಾದ ಗಡಿಯನ್ನು ಅತಿಕ್ರಮಿಸಿ ಚೀನಾ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಅಷ್ಟೇ ಅಲ್ಲದೇ ಚೀನಾದ ಚಟುವಟಿಕೆಗಳಿಗೆ ತಡೆಯೊಡ್ಡಿದ್ದಾರೆ. ಚೀನಾ ಇದಕ್ಕೆ ಪ್ರತಿಯಾಗಿ ಕ್ರಮಗಳನ್ನು ಕೈಗೊಂಡಿದೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. 
ಚೀನಾ ತನ್ನ ಪ್ರದೇಶ ಎಂದು ಕರೆದುಕೊಳ್ಳುತ್ತಿರುವ ಡೊಂಗ್ಲ್ಯಾಂಗ್ ಪ್ರದೇಶದಲ್ಲಿ ನಡೆಯುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಭಾರತೀಯ ಪಡೆ ಸಿಬ್ಬಂದಿಗಳು ತಡೆದಿದ್ದರು. ಭಾರತೀಯ ಪಡೆಗಳು ರಸ್ತೆ ನಿರ್ಮಾಣ ಕಾಮಗಾರಿಯನ್ನು ತಡೆಗಟ್ಟಿದ್ದರಿಂದ ಚೀನಾ ಮಾನಸಸರೋವರಕ್ಕೆ ಕೈಗೊಂಡಿದ್ದ ಭಾರತದ 47 ಯಾತ್ರಾರ್ಥಿಗಳನ್ನು ತಡೆದಿತ್ತು. ಈಗ ನಾಥು ಲಾ ಪಾಸ್‌ ಗೆ ಪ್ರವೇಶವನ್ನೂ ನಿರ್ಬಂಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com