ಮುಸ್ಲಿಂ ಕುಟುಂಬಕ್ಕೆ ಮನೆಯನ್ನು ರಂಜಾನ್ ಉಡುಗೊರೆಯಾಗಿ ನೀಡಿದ ನಟ ಪ್ರಕಾಶ್ ರೈ

ಬಹುಭಾಷಾ ನಟ ಪ್ರಕಾಶ್ ರೈ ಮನೆಯೊಂದನ್ನು ಮುಸ್ಲಿಂ ಕುಟುಂಬವೊಂದಕ್ಕೆ ರಂಜಾನ್ ಉಡುಗೊರೆಯಾಗಿ ನೀಡಿದ್ದಾರೆ.
ಮುಸ್ಲಿಂ ಕುಟುಂಬಕ್ಕೆ ಮನೆಯನ್ನು ರಂಜಾನ್ ಉಡುಗೊರೆಯಾಗಿ ನೀಡಿದ ನಟ ಪ್ರಕಾಶ್ ರೈ
ಮುಸ್ಲಿಂ ಕುಟುಂಬಕ್ಕೆ ಮನೆಯನ್ನು ರಂಜಾನ್ ಉಡುಗೊರೆಯಾಗಿ ನೀಡಿದ ನಟ ಪ್ರಕಾಶ್ ರೈ
ತೆಲಂಗಾಣ: ಬಹುಭಾಷಾ ನಟ ಪ್ರಕಾಶ್ ರೈ ಮನೆಯೊಂದನ್ನು ಮುಸ್ಲಿಂ ಕುಟುಂಬವೊಂದಕ್ಕೆ ರಂಜಾನ್ ಉಡುಗೊರೆಯಾಗಿ ನೀಡಿದ್ದಾರೆ. 
ಮೆಹಬೂಬ್ ನಗರ ಜಿಲ್ಲೆಯಲ್ಲಿರುವ ಕೊಂಡರೆಡ್ಡಿಪಲ್ಲಿರುವ ಕುಟುಂಬಕ್ಕೆ ಪ್ರಕಾಶ್ ರಾಜ್ ಫೌಂಡೇಶನ್ ನಿರ್ಮಿಸಿರುವ ಮನೆಯನ್ನು ಹಸ್ತಾಂತರಿಸುವ ಮೂಲಕ ರಂಜಾನ್ ಉಡುಗೊರೆ ನೀಡಿದ್ದಾರೆ. ಮನೆಯನ್ನು ಹಸ್ತಾಂತರಿಸಿರುವ ಬಗ್ಗೆ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, " ಕುಟುಂಬವೊಂದಕ್ಕೆ ಪ್ರಕಾಶ್ ರಾಜ್ ಫೌಂಡೇಶನ್ ನಿರ್ಮಿಸಿರುವ ಮನೆಯನ್ನು ಹಸ್ತಾಂತರಿಸುವ ಮೂಲಕ ರಂಜಾನ್ ನ್ನು ಆಚರಣೆ ಮಾಡಿದೆ".... ಜೀವನಕ್ಕೆ ವಾಪಸ್ ಕೊಡುವುದರಲ್ಲಿನ ಖುಷಿ..." ಎಂದು ಟ್ವೀಟ್ ಮಾಡಿದ್ದಾರೆ. 
ಪ್ರಕಾಶ್ ರೈ ಮೆಹಬೂಬ್ ನಗರದ ಕೊಂಡರೆಡ್ಡಿಪಲ್ಲಿ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದು, ಗ್ರಾಮದಲ್ಲಿ ಕೆಲವು ತಿಂಗಳಿನಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಚೊಟೆ ಮಿಯಾನ್ ಎಂಬುವವರು ಅವರ ಪತ್ನಿ, ಮೂವರು ಹೆಣ್ಣು ಮಕ್ಕಳೊಂದಿಗೆ ಶಿಥಿಲಗೊಂಡಿದ್ದ ಮನೆಯಲ್ಲಿದ್ದರು. ಈದ್ ಹಬ್ಬದಂದು ಕೊಂಡರೆಡ್ಡಿಪಲ್ಲಿರುವ ಗ್ರಾಮಕ್ಕೆ ಭೇಟಿ ನೀಡಿದ್ದು, ಟ್ವಿಟರ್ ನಲ್ಲಿ ಫೋಟೊ ಅಪ್ ಡೇಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com