ಸಾಂದರ್ಭಿಕ ಚಿತ್ರ
ದೇಶ
ಭದ್ರತಾ ಸಂಬಂಧಗಳನ್ನು ವೃದ್ಧಿಸಲಿರುವ ಭಾರತ-ಅಮೆರಿಕಾ; ಒತ್ತೆಯಾಳು ಬಿಕ್ಕಟ್ಟು, ಸೈಬರ್ ಅಪರಾಧ ಕುರಿತು ವಿನಿಮಯ ಕಾರ್ಯಕ್ರಮ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅಡಿಯಲ್ಲಿ ಭಾರತ ಮತ್ತು ಅಮೆರಿಕಾ ತನ್ನ ದ್ವಿಪಕ್ಷೀಯ...
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅಡಿಯಲ್ಲಿ ಭಾರತ ಮತ್ತು ಅಮೆರಿಕಾ ತನ್ನ ದ್ವಿಪಕ್ಷೀಯ ಭದ್ರತಾ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತಿದೆ. ಒತ್ತೆಯಾಳು ಬಿಕ್ಕಟ್ಟು, ಭಯೋತ್ಪಾದನೆ ಅಪರಾಧ ಸನ್ನಿವೇಶದ ತನಿಖೆ ಮತ್ತು ಸೈಬರ್ ಅಪರಾಧ ವಿಷಯಗಳಲ್ಲಿ ಕಾರ್ಯಕ್ರಮಗಳ ವಿನಿಮಯ ಮುಂದುವರಿಕೆಗೆ ಎರಡೂ ರಾಷ್ಟ್ರಗಳು ನಿರ್ಧರಿಸಿವೆ.
ಅಮೆರಿಕಾ ಅಧಿಕಾರಿಗಳ ನಿಯೋಗ ಕಳೆದ ವಾರ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ, ಭಯೋತ್ಪಾದನೆ ವಿರೋಧಿ ನೆರವು (ಎಟಿಎ) ಒಪ್ಪಂದದಡಿಯಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮಗಳ ಕುರಿತು ಮಾತುಕತೆ ನಡೆಸಿದರು.
ಒತ್ತೆಯಾಳು ಬಿಕ್ಕಟ್ಟು, ಭಯೋತ್ಪಾದನೆ ಅಪರಾಧ ಸನ್ನಿವೇಶದ ತನಿಖೆ ಮತ್ತು ಸೈಬರ್ ಅಪರಾಧ ವಿಷಯಗಳಲ್ಲಿ ಅಮೆರಿಕಾ ತರಬೇತಿ ಸಂಸ್ಥೆಯಲ್ಲಿ ಭಾರತೀಯ ಪೊಲೀಸ್ ಅಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೈಬರ್ ಅಪರಾಧ ಮತ್ತು ಕಡಲ ಭದ್ರತೆ ವಿಷಯಗಳಲ್ಲಿ ಕೂಡ ತರಬೇತಿ ಪಡೆಯಲಿದ್ದಾರೆ.
ಈ ತರಬೇತಿ ಕಾರ್ಯಕ್ರಮ ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯ ಸಹಕಾರ ಮತ್ತು ಆಂತರಿಕ ಭದ್ರತೆ ವಿಷಯದ ಭಾಗವಾಗಲಿದೆ.

