"ಜಯಾ ಸಾವಿನ ಕುರಿತು ಶಂಕೆ ಬೇಡ"; ವೈದ್ಯರ ವರದಿ ಬಿಡುಗಡೆ ಮಾಡಿದ ತ.ನಾಡು ಸರ್ಕಾರ

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಕುರಿತಂತೆ ಎದ್ದಿರುವ ಊಹಾಪೋಹಗಳಿಗೆ ತಮಿಳುನಾಡು ಸರ್ಕಾರ ತೆರೆ ಎಳೆಯುವ ಪ್ರಯತ್ನ ಮಾಡಿದ್ದು, ಸೋಮವಾರ ದೆಹಲಿಯ ಏಮ್ಸ್ ವೈದ್ಯರು ನೀಡಿರುವ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಕುರಿತಂತೆ ಎದ್ದಿರುವ ಊಹಾಪೋಹಗಳಿಗೆ ತಮಿಳುನಾಡು ಸರ್ಕಾರ ತೆರೆ ಎಳೆಯುವ ಪ್ರಯತ್ನ ಮಾಡಿದ್ದು, ಸೋಮವಾರ ದೆಹಲಿಯ ಏಮ್ಸ್ ವೈದ್ಯರು ನೀಡಿರುವ  ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಜಯಲಲಿತಾ ಅವರಿಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಜಯಾ ಆರೋಗ್ಯ ಮೇಲ್ವಿಚಾರಣೆ ನಡೆಸಿದ್ದರು. ಹೀಗಾಗಿ ಜಯಾ ಸಾವಿನ ಕುರಿತು ಎದ್ದಿರುವ  ಗೊಂದಲಗಳಿಗೆ ತೆರೆ ಎಳೆಯಲು ತಮಿಳುನಾಡಜು ಸರ್ಕಾರ ಏಮ್ಸ್ ವೈದ್ಯರ ವರದಿ ಕೇಳಿತ್ತು. ಇಂದು ದೆಹಲಿ ಏಮ್ಸ್ ಆಸ್ಪತ್ರೆ ವೈದ್ಯರು ತಮ್ಮ ವರದಿಯನ್ನು ತಮಿಳುನಾಡು ಸರ್ಕಾರಕ್ಕೆ ನೀಡಿದ್ದು, 19 ಪುಟಗಳ ವರದಿಯನ್ನು  ತಮಿಳುನಾಡು ಸರ್ಕಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

ಇದೇ ವೇಳೆ ಜಯಾ ಸಾವಿನ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರ, ಜಯಲಲಿತಾ ಅವರ ಸಾವಿನಲ್ಲಿ ಯಾವುದೇ ರೀತಿಯ ವಿವಾದಗಳಿಲ್ಲ. ಜಯಾ ಆಸ್ಪತ್ರೆಗೆ ದಾಖಲಾದ ದಿನದಿಂದ ಸರ್ಕಾರ ಏನು ಹೇಳುತ್ತಿತ್ತೋ ಅದೇ ಅಂಶಗಳು  ವರದಿಯಲ್ಲಿದ್ದು, ಅವರ ಸಾವಿನ ಕುರಿತಂತೆ ಯಾವುದೇ ರೀತಿಯ ಶಂಕೆ ಬೇಡ. ಆರಂಭದ ದಿನದಿಂದಲೂ ಜಯಾ ಅವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಸಾವಿನ ಹಿಂದೆ ಯಾವುದೇ ರೀತಿಯ ಷಡ್ಯಂತ್ರ ಅಥವಾ  ಪಿತೂರಿ ನಡೆಸಿಲ್ಲ. ಈ ಬಗ್ಗೆ ಚೆನ್ನೈ ಅಪೋಲೋ ಮತ್ತು ದೆಹಲಿಯ ಏಮ್ಸ್ ಆಸ್ಪತ್ರೆಯ ತಜ್ಞ ವೈದ್ಯರು ನೀಡಿರುವ ವರದಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.

ಜಯಾ ಸಾವಿನ ತನಿಖೆಗೆ ಆಗ್ರಹಿಸಿ ಪನ್ನೀರ್ ಸೆಲ್ವಂ ಉಪವಾಸ ಸತ್ಯಾಗ್ರಹ
ಏತನ್ಮಧ್ಯೆ ಜಯಲಲಿತಾ ಅವರ ಸಾವಿನ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ತಮಿಳುನಾಡು ಮಾಜಿ ಸಿಎಂ ಮತ್ತು ಜಯಲಲಿತಾ ಅವರ ಆಪ್ತ ಒ ಪನ್ನೀರ್ ಸೆಲ್ವಂ ಅವರು ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆ  ನೀಡಿದ್ದಾರೆ. ಪನ್ನೀರ್ ಸೆಲ್ವಂ ಮತ್ತು ಅವರ ಬಣದ ಮುಖಂಡರು ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸ್ಮಾರಕದ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com