ವಿಧಾನಸಭಾ ಚುನಾವಣೆಯಲ್ಲಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷಕ್ಕೆ ನೀಡಿದ್ದೀರಿ, ಈ ಬಾರಿ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದರೆ ಒಂದು ವರ್ಷದಲ್ಲಿ ದೆಹಲಿಯನ್ನು ಲಂಡನ್ ಮಾಡುತ್ತೇವೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಎಲ್ಲಾ 272 ಸ್ಥಾನಗಳನ್ನೂ ಆಮ್ ಆದ್ಮಿ ಪಕ್ಷಕ್ಕೇ ನೀಡಿ, ಕಾಂಗ್ರೆಸ್, ಬಿಜೆಪಿ ಎರಡನ್ನೂ ನೋಡಿದ್ದೀರಿ, ಎರಡೂ ಪಕ್ಷಗಳು ಭ್ರಷ್ಟ ಪಕ್ಷಗಳಾಗಿವೆ, ನಿಮಗಾಗಿ ಕೆಲಸ ಮಾಡುವುದು ಆಮ್ ಆದ್ಮಿ ಪಕ್ಷವಷ್ಟೇ ಎಂದು ಕೇಜ್ರಿವಾಲ್ ಹೇಳಿದ್ದಾರೆ.