ಹೆಚ್ 1 ಬಿ ವೀಸಾ ಕುರಿತು ಅಮೆರಿಕಾಕ್ಕೆ ನಮ್ಮ ಆತಂಕವನ್ನು ತಿಳಿಸಲಾಗಿದೆ: ರವಿಶಂಕರ್ ಪ್ರಸಾದ್

ಹೆಚ್-1ಬಿ ವೀಸಾ ಪ್ರಕ್ರಿಯೆಯನ್ನು ತಡೆಹಿಡಿಯುವ ಅಮೆರಿಕಾ ಸರ್ಕಾರದ ನಡೆಗೆ ಭಾರತ ಸರ್ಕಾರ ತನ್ನ...
ರವಿಶಂಕರ್ ಪ್ರಸಾದ್(ಸಂಗ್ರಹ ಚಿತ್ರ)
ರವಿಶಂಕರ್ ಪ್ರಸಾದ್(ಸಂಗ್ರಹ ಚಿತ್ರ)
ನವದೆಹಲಿ: ಹೆಚ್-1ಬಿ ವೀಸಾ ತ್ವರಿತ ನೀಡಿಕೆ ಪ್ರಕ್ರಿಯೆಯನ್ನು ತಡೆಹಿಡಿಯುವ ಅಮೆರಿಕಾ ಸರ್ಕಾರದ ನಡೆಗೆ ಭಾರತ ಸರ್ಕಾರ ತನ್ನ ಕಳವಳ ವ್ಯಕ್ತಪಡಿಸಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ನಮ್ಮ ಕಳವಳ, ಆತಂಕಗಳನ್ನು ಅಮೆರಿಕಾಕ್ಕೆ ತಿಳಿಸಿದ್ದೇವೆ. ಫೋರ್ಬ್ಸ್ ಕಂಪೆನಿಗಳಲ್ಲಿ ಶೇಕಡಾ 75ರಷ್ಟು ಕಂಪೆನಿಗಳು ಭಾರತೀಯ ಮೂಲದ್ದಾಗಿವೆ. ಭಾರತೀಯ ಐಟಿ ಕಂಪೆನಿಗಳು ಅಮೆರಿಕಾದ ಕಂಪೆನಿಗಳಿಗೆ ಅವಕಾಶಗಳನ್ನು ನೀಡಿವೆ. ಇಡೀ ಐಟಿ ನಡೆ ಹಂಚಿಕೆ ಮತ್ತು ಪರಸ್ಪರ ಸೌಹಾರ್ದತೆಯನ್ನು ಹೊಂದಿವೆ ಎಂದು ಅವರು ಹೇಳಿದರು. 
ಏಪ್ರಿಲ್ 3ರಿಂದ ಹೆಚ್ -1ಬಿ ವೀಸಾ ನೀಡುವ ತ್ವರಿತ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಆರು ತಿಂಗಳವರೆಗೆ ರದ್ದುಪಡಿಸುವುದಾಗಿ ಅಮೆರಿಕಾ ಕಳೆದ ವಾರ ಹೇಳಿತ್ತು. ಇದರಿಂದ ಅಧಿಕ ಹಣ ನೀಡಿ ತುರ್ತಾಗಿ ವೀಸಾ ಪಡೆದುಕೊಂಡು ಅಮೆರಿಕಾಕ್ಕೆ ಹೋಗಿ ಕೆಲಸ ಮಾಡುವ ಅತಿ ಕುಶಲ ಕೆಲಸಗಾರರಿಗೆ ತೊಂದರೆಯುಂಟಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com