ಅಮೆರಿಕಾದ ಸಮಸ್ಯೆ ಅಕ್ರಮ ವಲಸೆಯೇ ಹೊರತು ಹೆಚ್-1ಬಿ ವೀಸಾ ಅಲ್ಲ: ಭಾರತ

ಅಮೆರಿಕಾದ ಆರ್ಥಿಕತೆಗೆ ಭಾರತೀಯ ಐಟಿ ಉದ್ಯೋಗಿಗಳು ಕೊಡುಗೆ ನೀಡಿದ್ದು, ಅಕ್ರಮ ವಲಸೆ ವಿಷಯ ಅಮೆರಿಕಾದ ಆದ್ಯತೆಯಾಗಿದೆಯೇ ಹೊರತು ಹೆಚ್-1 ಬಿ ವೀಸಾ ಅಲ್ಲ ಎಂದು ಭಾರತ ಹೇಳಿದೆ.
ಅಮೆರಿಕಾದ ಸಮಸ್ಯೆ ಅಕ್ರಮ ವಲಸೆಯೇ ಹೊರತು ಹೆಚ್-1ಬಿ ವೀಸಾ ಅಲ್ಲ: ಭಾರತ
ಅಮೆರಿಕಾದ ಸಮಸ್ಯೆ ಅಕ್ರಮ ವಲಸೆಯೇ ಹೊರತು ಹೆಚ್-1ಬಿ ವೀಸಾ ಅಲ್ಲ: ಭಾರತ
ನವದೆಹಲಿ: ಅಮೆರಿಕಾದ ಆರ್ಥಿಕತೆಗೆ ಭಾರತೀಯ ಐಟಿ ಉದ್ಯೋಗಿಗಳು ಕೊಡುಗೆ ನೀಡಿದ್ದು, ಅಕ್ರಮ ವಲಸೆ ವಿಷಯ ಅಮೆರಿಕಾದ ಆದ್ಯತೆಯಾಗಿದೆಯೇ ಹೊರತು ಹೆಚ್-1 ಬಿ ವೀಸಾ ಅಲ್ಲ ಎಂದು ಭಾರತ ಹೇಳಿದೆ. 
ಭಾರತೀಯ ಉದ್ಯೋಗಿಗಳ ಇರುವಿಕೆ ಅಮೆರಿಕಾವನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸಲು ಸಹಕಾರಿಯಾಗಲಿದ್ದು, ಆರ್ಥಿಕತೆಗೆ ಸಹಕಾರಿ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ " ಅಮೆರಿಕಾದ ಆದ್ಯತೆ ಅಕ್ರಮ ವಲಸೆ ವಿಷಯವೇ ಹೊರತು ಹೆಚ್-1 ಬಿ ವೀಸಾ ಅಲ್ಲ ಎಂಬುದನ್ನು ಅಮೆರಿಕಾದ ಅಧಿಕಾರಿಗಳೂ ಹೇಳಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಗೋಪಾಲ್ ಬಾಗ್ಲೆ ಹೇಳಿದ್ದಾರೆ. 
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಾಗೂ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಎಸ್.ಜೈಶಂಕರ್ ಮಾತುಕತೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೋಪಾಲ್ ಬಾಗ್ಲೆ, ಅಮೆರಿಕಾದಲ್ಲಿ ಭಾರತೀಯರ ಕೌಶಲ ಹಾಗೂ ಕೊಡುಗೆಗಳಿಗೆ ಅಪಾರ ಮನ್ನಣೆ ಇದ್ದು, ಅಮೆರಿಕಾದ ಆರ್ಥಿಕತೆಗೆ ನೆರವಾಗಲಿದೆ ಎಂದು ಹೇಳಿದ್ದಾರೆ. 
ಹೆಚ್-1 ಬಿ ವೀಸಾಗೆ ಸಂಬಂಧಿಸಿದಂತೆ ನಮ್ಮ ನಿಲುವುಗಳನ್ನು ಅಮೆರಿಕಾಗೆ ಸ್ಪಷ್ಟವಾಗಿ ರವಾನೆ ಮಾಡಲಾಗಿದೆ. ಉಭಯ ರಾಷ್ಟ್ರಗಳ ಆರ್ಥಿಕತೆಯೂ ಸದೃಢಗೊಳ್ಳುವುದಕ್ಕೆ ಪೂರಕವಾಗಿ ಅಮೆರಿಕಾದ ಆಡಳಿತ ಅವಕಾಶ ನೀಡಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com