ಉತ್ತರಪ್ರದೇಶದಲ್ಲಿ ಭರ್ಜರಿ ಜಯ: ಪ್ರಧಾನಿ ಮೋದಿಗೆ ಶುಭಾಶಯ ಹೇಳಿದ ಪಾಕ್ ಬಾಲಕಿ

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಶುಭಾಶಯ ಕೋರಿ ಪಾಕಿಸ್ತಾನ ಮೂಲದ ಬಾಲಕಿಯೊಬ್ಬಳು ಪತ್ರವೊಂದನ್ನು ಬರೆದಿದ್ದಾಳೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಶುಭಾಶಯ ಕೋರಿ ಪಾಕಿಸ್ತಾನ ಮೂಲದ ಬಾಲಕಿಯೊಬ್ಬಳು ಪತ್ರವೊಂದನ್ನು ಬರೆದಿದ್ದಾಳೆ. 
ಪಾಕಿಸ್ತಾನದ ಅಖೀದತ್ ನವೀದ್ ಎಂಬ 11 ವರ್ಷದ ಶಾಲಾ ಬಾಲಕಿಯೊಬ್ಬಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಉತ್ತರಪ್ರದೇಶದ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಕ್ಕೆ ಶುಭಾಶಯಗಳನ್ನು ಕೋರಿದ್ದಾಳೆ. ಅಲ್ಲದೆ, ಉಭಯ ರಾಷ್ಟ್ರಗಳ ಶಾಂತಿ ಸೇತುವೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾಳೆ.
ಜನರ ಹೃದಯ ಗೆಲ್ಲುವುದು ಅದ್ಭುತವಾದ ಕೆಲಸ ಎಂದು ನನ್ನ ತಂದೆ ಹೇಳುತ್ತಿದ್ದರು. ನೀವು ಭಾರತೀಯ ಜನರ ಹೃದಯವನ್ನು ಗೆದ್ದಿದ್ದೀರ. ಹೀಗಾಗಿಯೇ ನೀವು ಉತ್ತರಪ್ರದೇಶ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದೀರ. ಮತ್ತಷ್ಟು ಭಾರತೀಯರು ಹಾಗೂ ಪಾಕಿಸ್ತಾನ ಜನತೆಯ ಹೃದಯಗಳನ್ನು ನೀವು ಗೆಲ್ಲಬೇಕಾದರೆ, ಉಭಯ ರಾಷ್ಟ್ರಗಳ ನಡುವೆ ಸ್ನೇಹ ಮತ್ತು ಶಾಂತಿಯನ್ನು ನಿರ್ಮಾಣ ಮಾಡಬೇಕು. ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಏರ್ಪಡಬೇಕು. 
ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯುತ ಸೇತುವೆಯನ್ನು ನಿರ್ಮಾಣ ಮಾಡಿ. ಬುಲೆಟ್ ಗಳನ್ನು ನಾವು ಖರೀದಿ ಮಾಡುವುದಿಲ್ಲ. ಬದಲಾಗಿ ಪುಸ್ತಕಗಳನ್ನು ಖರೀದಿ ಮಾಡೋಣ. ಗನ್ ಗಳನ್ನು ಖರೀದಿ ಮಾಡುವುದಿಲ್ಲ, ಬಡವರಿಗಾಗಿ ಔಷಧಿಗಳನ್ನು ಖರೀದಿ ಮಾಡೋಣವೆಂದು ನಿರ್ಧಾರ ಕೈಗೊಳ್ಳೋಣ ಎಂದು ಅಖೀದತ್ ತನ್ನ ಪತ್ರದಲ್ಲಿ ಹೇಳಿಕೊಂಡಿದ್ದಾಳೆ. ಇದೇ ವೇಳೆ ಉತ್ತರಪ್ರದೇಶ ಗೆಲವಿಗೆ ಪ್ರಧಾನಿ ಮೋದಿಯವರಿಗೆ ಶುಭಾಶಯಗಳನ್ನು ತಿಳಿಸಿದ್ದಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com