ದೇಶದ ಸಾರ್ವಭೌಮತ್ವ ರಕ್ಷಣೆಗಾಗಿ ಝಾಕಿರ್ ನಾಯ್ಕ್ ಸಂಸ್ಥೆಗೆ ನಿಷೇಧ: ಕೇಂದ್ರದ ನಿರ್ಧಾರ ಎತ್ತಿಹಿಡಿದ "ಹೈ"

ದೇಶದ ಸಾರ್ವಭೌಮತ್ವ ರಕ್ಷಣೆಗಾಗಿ ಕೇಂದ್ರ ಸರ್ಕಾರ ವಿವಾದಿತ ಝಾಕಿರ್ ನಾಯ್ಕ್ ನೇತೃತ್ವದ ಎನ್'ಜಿಎ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಮೇಲೆ ನಿಷೇಧ ಹೇರಿದೆ ಎಂದು ದೆಹಲಿ ಹೈಕೋರ್ಟ್...
ಝಾಕಿರ್ ನಾಯ್ಕ್
ಝಾಕಿರ್ ನಾಯ್ಕ್
ನವದೆಹಲಿ: ದೇಶದ ಸಾರ್ವಭೌಮತ್ವ ರಕ್ಷಣೆಗಾಗಿ ಕೇಂದ್ರ ಸರ್ಕಾರ ವಿವಾದಿತ ಝಾಕಿರ್ ನಾಯ್ಕ್ ನೇತೃತ್ವದ ಎನ್'ಜಿಎ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಮೇಲೆ ನಿಷೇಧ ಹೇರಿದೆ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ. 
ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಕುರಿತಂತೆ ಈ ಹಿಂದೆ ಝಾಕಿರ್ ನಾಯ್ಕ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಇಂದು ಪರಿಶೀಲಿಸಿರುವ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ನಿರ್ಧಾರವನ್ನು ಎತ್ತಿಹಿಡಿದಿದೆ. 
ದೇಶದ ಸಾರ್ವಭೌಮತ್ವವನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ನಿಷೇಧ ನಿರ್ಧಾರವನ್ನು ಕೈಗೊಂಡಿದೆ. ಎನ್ ಜಿಎ ಸಂಸ್ಥೆ ಮೇಲೆ ನಿಷೇಧ ಹೇರುವ ಕುರಿತಂತೆ ವಿದೇಶಾಂಗ ಸಚಿವಾಲಯದ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಹೇಳಿದೆ. 
ಇಸ್ಲಾಂ ಧರ್ಮ ಪ್ರಚಾರಕ ವಿವಾದಿತ ಝಾಕಿರ್ ನಾಯ್ಕ್ ನೇತೃತ್ವದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯನ್ನು ನಿಷೇಧಿತ ಸಂಘಟನೆ ಎಂದುಪ ಘೋಷಿಸುವಂತೆ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೇಂದ್ರ ಗೃಹ ಸಚಿವಾಲಯವು ಸಂಪುಟ ಸಭೆಗೆ ಟಿಪ್ಪಣಿ ಕಳುಹಿಸಿತ್ತು. ವಿದೇಶಿ ದೇಣಿಗೆ ಪಡೆಯುವ ಪರವಾನಗಿ ರದ್ದುಗೊಳಿಸುವ ಪ್ರಕ್ರಿಯೆಯನ್ನು ಇದೇ ತಿಂಗಳಿನಲ್ಲಿಯೇ ಸಚಿವಾಲಯ ಕೈಗೆತ್ತಿಕೊಂಡಿತ್ತು. 
ಝಾಕಿರ್ ನಾಯಕ್ ನೇತೃತ್ವದ ಎನ್ ಜಿಒದಲ್ಲಿ ಸರಣಿ ಅಕ್ರಮಗಳು ನಡೆಯುತ್ತಿರುವುದನ್ನು ಹಲವು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿದ ಬಳಿಕ ಈ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿತ್ತು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಆರೋಪವಿರುವ ಪೀಸ್ ಟಿ.ವಿ ಜೆತೆ ಝಾಕೀರ್ ಸಂಸ್ಥೆ ನಂಟು ಹೊಂದಿದೆ ಎಂಬ ಆರೋಪಗಳೂ ಕೇಳಿಬಂದಿತ್ತು. ಇದಲ್ಲದೆ, ಝಾಕಿರ್ ನಾಯ್ಕ್ ಅವರ ಬೋಧನೆಯಿಂದ ಪ್ರೇರಿತರಾಗಿದ್ದೇವೆಂದು ಕೆಲ ಭಯೋತ್ಪಾದಕರೂ ಕೂಡ ಹೇಳಿಕೊಂಡಿದ್ದರು. ನಂತರ ಝಾಕೀರ್ ಪ್ರಚೋದನಾಕಾರಿ ಭಾಷಣಗಳ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com