ಸುಕ್ಮಾ ದಾಳಿ: ಹುತಾತ್ಮ ಯೋಧರ ಕುಟುಂಬಕ್ಕೆ ರೂ.1.08 ಕೋಟಿ ನೆರವು ನೀಡಿದ ನಟ ಅಕ್ಷಯ್

ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ತಲಾ ರೂ.9 ಲಕ್ಷದಂತೆ ರೂ.1.08 ಕೋಟಿ ಹಣದ ನೆರವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನೀಡಿದ್ದಾರೆ...
ಬಾಲಿವುಡ್ ನಟ ಅಕ್ಷಯ್ ಕುಮಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್
Updated on
ಮುಂಬೈ: ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ತಲಾ ರೂ.9 ಲಕ್ಷದಂತೆ ರೂ.1.08 ಕೋಟಿ ಹಣದ ನೆರವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನೀಡಿದ್ದಾರೆ. 
ಸಿಆರ್ ಪಿಎಫ್'ನ ಜೈಸಲ್ಮೇರ್ ನಾರ್ತ್ ಸೆಕ್ಟರ್ ನ ಡಿಐಜಿ ಅಮಿತ್ ಲೋಧಾ ಅವರ ಜೊತೆಗೆ ನಟ ಅಕ್ಷಯ್ ಕುಮಾರ್ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಮೂಲಕವೇ ಸುಕ್ಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬದ ಸ್ಥಿತಿಗತಿಗಳನ್ನು ಅರಿತುಕೊಂಡು ಹುತಾತ್ಮ ಯೋಧರ ಪ್ರತೀ ಕುಟುಂಬಕ್ಕೆ ತಲಾ ರೂ.9 ಲಕ್ಷ ಆರ್ಥಿಕ ನೆರವು ನೀಡಿದ್ದಾರೆ. 
ಸ್ವತಃ ಅಕ್ಷಯ್ ಕುಮಾರ್ ಅವರೇ ನನ್ನೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ್ದರು. ಪ್ರತೀ ಬಾರಿ ಪರಿಸ್ಥಿತಿಗಳನ್ನು ವಿಚಾರಿಸಿ, ಮಾಹಿತಿ ಪಡೆದುಕೊಳ್ಳುತ್ತಿದ್ದರು. ಸುಕ್ಮಾ ದಾಳಿ ಬಗ್ಗೆ ನಾನು ಅಕ್ಷಯ್ ಅವರ ಬಳಿ ಹೇಳುತ್ತಿದ್ದಂತೆಯೇ ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಹೇಳಿದರು. ಯೋಧರ ಬಗ್ಗೆ ಅವರಿಗಿರುವ ಭಾವನೆಗಳಿಗೆ ನಾವು ಎಂದಿಗೂ ಕೃತಜ್ಞರಾಗಿರುತ್ತೇವೆಂದು ಡಿಐಜಿ ಲೋಧಾ ಅವರು ಹೇಳಿದ್ದಾರೆ. 
ನಟ ಅಕ್ಷಯ್ ಅವರು ನೆರವಿನ ಹಸ್ತ ನೀಡಿರುವುದು ಇದು ಮೊದಲೇನಲ್ಲ. ಈ ಹಿಂದೆ ಉರಿ ಉಗ್ರ ದಾಳಿ, ಅಸ್ಸಾಂನ ದಿಗ್ ಬೊಯ್ ದಾಳಿಗಳಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೂ ಅಕ್ಷಯ್ ನೆರವಿನ ಹಸ್ತ ನೀಡಿದ್ದರು.
ಮಾರ್ಚ್ 11 ರಂದು ಸುಲ್ಮಾ ಜಿಲ್ಲೆಯಲ್ಲಿ ನಕ್ಸಲರು ದಾಳಿ ನಡೆಸಿದ್ದರು. ದಾಳಿಯಲ್ಲಿ 219 ಬೆಟಾಲಿಯನ್ ಪಡೆಯ 12 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com