ಹಡಗುಗಳ ಮೂಲಕ ಭಾರತಕ್ಕೆ ಕಳ್ಳನೋಟು ಸಾಗಣೆ; ಬಂದರುಗಳಲ್ಲಿ ತೀವ್ರ ಶೋಧ

ಸರಕು ಸಾಗಣೆ ಹಗಡುಗಳ ಮೂಲಕ ಭಾರೀ ಪ್ರಮಾಣದ ನಕಲಿ ನೋಟುಗಳನ್ನು ಭಾರತದೊಳಗೆ ಸಾಗಿಸುತ್ತಿರುವ ಶಂಕೆಗಳು ವ್ಯಕ್ತವಾಗತೊಡಗಿದ್ದು, ಈ ಹಿನ್ನಲೆಯಲ್ಲಿ ಚೆನ್ನೈ ಬಂದರಿನಲ್ಲಿ ಅಧಿಕಾರಿಗಳು ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ...
ಹಡಗುಗಳ ಮೂಲಕ ಭಾರತಕ್ಕೆ ಕಳ್ಳನೋಟು ಸಾಗಣೆ; ಬಂದರುಗಳಲ್ಲಿ ತೀವ್ರ ಶೋಧ
ಹಡಗುಗಳ ಮೂಲಕ ಭಾರತಕ್ಕೆ ಕಳ್ಳನೋಟು ಸಾಗಣೆ; ಬಂದರುಗಳಲ್ಲಿ ತೀವ್ರ ಶೋಧ
ಚೆನ್ನೈ: ಸರಕು ಸಾಗಣೆ ಹಗಡುಗಳ ಮೂಲಕ ಭಾರೀ ಪ್ರಮಾಣದ ನಕಲಿ ನೋಟುಗಳನ್ನು ಭಾರತದೊಳಗೆ ಸಾಗಿಸುತ್ತಿರುವ ಶಂಕೆಗಳು ವ್ಯಕ್ತವಾಗತೊಡಗಿದ್ದು, ಈ ಹಿನ್ನಲೆಯಲ್ಲಿ ಚೆನ್ನೈ ಬಂದರಿನಲ್ಲಿ ಅಧಿಕಾರಿಗಳು ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ. 
ಚೆನ್ನೈನ ಬಂದರಿನಲ್ಲಿ ಕಂಟೇನರ್'ಗಳನ್ನು ಕಂದಾಯ ಗುಪ್ತಚರ ಇಲಾಖೆ ಶೋಧಕ್ಕೆ ಗುರಿಪಡಿಸಿದೆ. ನಕಲಿ ನೋಟುಗಳ ಪತ್ತೆಗಾಗಿ ದೆಹಲಿಯ ತುಘಲಕಾಬಾದ್ ನಲ್ಲಿರುವ ಕಂಟೇನರ್ ಡಿಪೋದಲ್ಲಿ ಶೋಧ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. 
ಭಾರಿ ಪ್ರಮಾಣದ ರೂ.500 ಮತ್ತು 2000 ನೋಟುಗಳು ಹಡಗುಗಳ ಮೂಲಕ ಕರಾವಳಿ ಬಂದರಿಗೆ ಆಗಮಿಸುತ್ತಿದೆ ಎಂಬ ಮಾಹಿತಿ ತಿಳಿದುಬಂದ ಹಿನ್ನಲೆಯಲ್ಲಿ ಬಂದರುಗಳ ಮೇಲೆ ತೀವ್ರ ನಿಗಾ ಇರಿಸಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com