ಕೋಮು ದ್ವೇಷ, ಹಣದ ಶಕ್ತಿಯಿಂದ ಉ.ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ: ಕೇರಳ ಸಿಎಂ

ಕೋಮುವಾದಿ ದ್ವೇಷವನ್ನು ಹರಡುವ ಮೂಲಕ ಹಾಗೂ ಹಣದ ಶಕ್ತಿಯಿಂದ ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆರೋಪ ಮಾಡಿದ್ದಾರೆ...
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಹೈದರಾಬಾದ್: ಕೋಮುವಾದಿ ದ್ವೇಷವನ್ನು ಹರಡುವ ಮೂಲಕ ಹಾಗೂ ಹಣದ ಶಕ್ತಿಯಿಂದ ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆರೋಪ ಮಾಡಿದ್ದಾರೆ. 
ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಿನ್ನೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಗೋವಾ ಹಾಗೂ ಮಣಿಪುರದಲ್ಲಿ ಸೋಲು ಕಂಡರೂ ಬಿಜೆಪಿ ಸರ್ಕಾರವನ್ನು ರಚನೆ ಮಾಡಿದೆ. ಈ ಮೂಲಕ ಬಿಜೆಪಿ ಅಪ್ರಜಾಪ್ರಭುತ್ವನ್ನು ಬಳಕೆ ಮಾಡಿದೆ. ಪಂಜಾಬ್ ರಾಜ್ಯದಲ್ಲಿ ಬಿಜೆಪಿಗೆ ಕೇವಲ ಮೂಲು ಸೀಟ್ ಗಳು ಮಾತ್ರ ದೊರಕಿತ್ತು. ಜನರು ಬಿಜೆಪಿಗೆ ಮತ ಹಾಕಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆಧರೂ, ಇಲ್ಲಿ ಬಿಜೆಪಿ ಪ್ರಚೋದಿಸುವ ಪ್ರಯತ್ನಗಳನ್ನು ಮಾಡಿತ್ತು. ಕೋಮುವಾದಿಗಳನ್ನು ಸೋಲಿಸು ಪ್ರಜಾಪ್ರಭುತ್ವ ಪಡೆ ಕೈಜೋಡಿಸಬೇಕಿದೆ ಎಂದು ಹೇಳಿದ್ದಾರೆ. 
2014ರ ಸಾಮಾನ್ಯ ಚುನಾವಣೆಯಲ್ಲಿ ಶೇ.42.3ರಷ್ಟು ಮತಗಳನ್ನು ಬಿಜೆಪಿ ಪಡೆದಿತ್ತು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಶೇ.39.7ರಷ್ಟು ಮತಗಳನ್ನು ಪಡೆದಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸಿದೆ ಎಂದು ಹೇಳುವ ಜನರು ಮೊದಲು ಶೇಕಡಾವಾರುಗಳ ಮತಗಳನ್ನು ನೋಡಬೇಕಿದೆ. ಶೇ.60 ರಷ್ಟು ಉತ್ತರಪ್ರದೇಶದ ಜನರು ಬಿಜೆಪಿ ವಿರುದ್ಧವೇ ಮತಹಾಕಿದ್ದಾರೆ.
ಕೋಮುವಾದಿ ದ್ವೇಷವನ್ನು ದೇಶದಲ್ಲಿ ಪಸರುವ ಮೂಲಕ ಹಾಗೂ ಹಣದ ಪ್ರಭಾವದ ಬಿಜೆಪಿ ಗೆಲವು ಸಾಧಿಸಿದೆ. ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಿ ನಿಂತಿಲ್ಲ. ಬಿಜೆಪಿ ಈ ರೀತಿಯಲ್ಲಿ ಗೆಲವು ಸಾಧಿಸಿದೆ ಹಾಗೂ ಕೋಮುವಾದಿ ಜನರು ಗೆಲವು ಸಾಧಿಸಿರುವುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಕಾಂಗ್ರೆಸ್'ನ್ನು ಗುರಿಯಾಗಿರಿಸಿಕೊಂಡು ಮಾತನಾಡಿರುವ ಅವರು, ಕಾಂಗ್ರೆಸ್ ಏಕಪಕ್ಷವಾಗಿದ್ದರೂ, ದೊಡ್ಡ ಪಕ್ಷವಾಗಿ ಬೆಳೆದಿದೆ. ಆದರೂ ಮಣಿಪುರ ಹಾಗೂ ಗೋವಾದಲ್ಲಿ ಸರ್ಕಾರ ರಚನೆ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನೋಡಬಹುದು. ಕಾಂಗ್ರೆಸ್ ಹಿರಿಯ ನಾಯಕ ಎಸ್.ಎಂ ಕೃಷ್ಣ ಹಾಗೂ ರಿತಾ ಜೋಶಿ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆಂದು ಹೇಳಿದ್ದಾರೆ. 
ಕೋಮುವಾದಿ ಸರ್ಕಾರವನ್ನು ಸೋಲಿಸಲು ಪ್ರಜಾಪ್ರಭುತ್ವ ಪಡೆ ಕೈಜೊಡಿಸಬೇಕಿದೆ. ಕೇಂದ್ರ ಸರ್ಕಾರ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರವನ್ನು ನಡೆಸುತ್ತಿದೆ. ಅರುಣಾಚಲ ಪ್ರದೇಶ ಹಾಗೂ ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಕೇಂದ್ರ ಸರ್ಕಾರ ಹೇರಿತ್ತು. ಇದರಿಂದ ಯಾವ ಮಟ್ಟಕ್ಕೆ ಹಿಂಸಾಚಾರ ಸೃಷ್ಟಿಯಾಗಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಬಿಜೆಪಿ ಅಧಿಕಾರವಿಲ್ಲದ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಹಗೆತನವನ್ನು ಸಾಧಿಸುತ್ತಿದೆ. ಇದನ್ನು ನಾವು ಕೂಡ ನೋಡಿದ್ದೇವೆ. 
ದಕ್ಷಿಣ ಭಾರತ ಸಂಘ ಪರಿವಾರಗಳನ್ನು ಹೊರಗಿಟ್ಟಿದೆ. ಇದೀಗ ನಮ್ಮ ಶಾಂತಿಯುತ ಜೀವನ್ನು ಹಾಳು ಮಾಡಲು ಅವರು ಯತ್ನಿಸುತ್ತಿದ್ದಾರೆ. ಮುಜಾಫರ್ ನಗರ, ಮೀರುತ್, ಅಸ್ಸಾಂ, ಸಹರನ್ಪುರದಲ್ಲಿ ಗಲಭೆಗಳು ನಡೆದಿತ್ತು. ಅಜ್ಮೇರ್ ನಲ್ಲಿ ಸ್ಫೋಟ ಪ್ರಕರಣಗಳಲ್ಲಿ ಆರ್'ಎಸ್ಎಸ್ ಕೈವಾಡ ಸಾಬೀತಾಗಿತ್ತು. ಆದರೂ, ಬಿಜೆಪಿ ಆರ್ ಎಸ್ಎಸ್'ನ್ನು ದೋಷಮುಕ್ತಗೊಳಿಸಿ ಸ್ವತಂತ್ರ ಮಾಡಿತ್ತು. ನಮ್ಮ ಅಡುಗೆ ಮನೆಯೊಳಗೆ ಬಂದು ನಮ್ಮನ್ನು ಹತ್ಯೆ ಮಾಡಲು ಆರ್'ಎಸ್ಎಸ್ ಮುಕ್ತರಾಗಿದ್ದಾರೆಂದು ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com