ದೇವರಿಗಾಗಿ ನಾಲಿಗೆ ಕತ್ತರಿಸಿಕೊಂಡ ಯುವಕ!

ದೇವರ ಆಶೀರ್ವಾದಕ್ಕಾಗಿ 19 ವರ್ಷದ ಯುವಕನೊಬ್ಬ ನಾಲಿಗೆಯನ್ನೇ ಕತ್ತರಿಸಿಕೊಂಡಿರುವ ವಿಲಕ್ಷಣ ಘಟನೆಯೊಂದು ಭುವನೇಶ್ವರದ ಕುಹುಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಭುವನೇಶ್ವರ: ದೇವರ ಆಶೀರ್ವಾದಕ್ಕಾಗಿ 19 ವರ್ಷದ ಯುವಕನೊಬ್ಬ ನಾಲಿಗೆಯನ್ನೇ ಕತ್ತರಿಸಿಕೊಂಡಿರುವ ವಿಲಕ್ಷಣ ಘಟನೆಯೊಂದು ಭುವನೇಶ್ವರದ ಕುಹುಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. 
ದೆಬಾ ತರಸ್ ನಾಲಿಗೆ ಕತ್ತರಿಸಿಕೊಂಡ ಯುವಕನೆಂದು ಹೇಳಲಾಗುತ್ತಿದೆ. ಖುರ್ದಾ ಜಿಲ್ಲೆಯ ನಿವಾಸಿಯಾಗಿರುವ ತರಸ್ ಕುಹುಡಿ ಕಾಲೇಜಿನಲ್ಲಿ ದ್ವಿತೀಯಿ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾನೆಂದು ಪೊಲೀಸರು ಹೇಳಿದ್ದಾರೆ. 
ನಿನ್ನೆ ಸಂದೆ ತರಸ್ ಚಾಂಡೇಶ್ವರ್ ಮಹಾದೇವನ ದೇವಸ್ಥಾನಕ್ಕೆ ಹೋಗಿದ್ದ. ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇಂದು ಬೆಳಿಗ್ಗೆ ಕುಟುಂಬಸ್ಥರು ಹುಡುಕಾಟ ಆರಂಭಿಸಿದಾಗ ದೇವಸ್ಥಾನದ ಮುಂದೆ ತರಸ್ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. 
ಕೂಡಲೇ ಯುವಕನನ್ನು ತಂಗಿ ಸಮುದಾಯದ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಪ್ರಸ್ತುತ ತರಸ್ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಯುವಕ ಚಾಕುವಿನಿಂದ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ. ಆದರೆ, ಸ್ಥಳದಲ್ಲಿ ಯಾವುದೇ ರೀತಿಯ ಚೂರಿಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com