ಸೌದಿ ಅರೇಬಿಯಾದ ಕಂಜಿ ಸಿಟಿಯಲ್ಲಿ ಭಾರತೀಯರನ್ನು ಬಂಧಿಸಲಾಗಿದೆ. ಭಾರತಕ್ಕೆ ಹೋಗುವ ಸಲುವಾಗಿ ಭಾರತೀಯರು ಕಂಪನಿ ಬಳಿ ರಜೆಯನ್ನು ಕೇಳಿದ್ದಾರೆ. ಇದಕ್ಕೆ ಕಂಪನಿ 50,000 ಡಾಲರ್ ನೀಡುವಂತೆ ತಿಳಿಸಿದೆ. ಅಲ್ಲದೆ, ಪ್ರಯಾಣದ ವೆಚ್ಚ ಭರಿಸಲು ನಿರಾಕರಿಸಿದೆ. ಹೀಗಾಗಿ ಭಾರತೀಯರು ನ್ಯಾಯಕ್ಕಾಗಿ ನ್ಯಾಯಾಲದ ಮೆಟ್ಟಿಲನ್ನು ಹತ್ತಿದ್ದಾರೆ. ಆದೇಶ ಹೊರಡಿಸಿದ್ದ ನ್ಯಾಯಾಲಯ ಭಾರತೀಯರಿಗೆ ಪ್ರಯಾಣದ ವೆಚ್ಚ ನೀಡಿ ಮೂರು ದಿನಗಳೊಳಗಾಗಿ ಭಾರತಕ್ಕೆ ಕಳುಹಿಸಿಕೊಡುವಂತೆ ಕಂಪನಿಗೆ ತಿಳಿಸಿದೆ.