ಗಾಯಗೊಂಡ ಪೊಲೀಸ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು
ಗಾಯಗೊಂಡ ಪೊಲೀಸ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು

ಜಮ್ಮು-ಕಾಶ್ಮೀರ: ಉಗ್ರರ ದಾಳಿ, ಓರ್ವನ ಬಂಧನ; ಪೊಲೀಸ್ ಗೆ ಗಾಯ

ಜಮ್ಮು-ಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಶಂಕಿತ ಉಗ್ರರು ಪೊಲೀಸ್ ಬಳಿಯಿಂದ...
ಶ್ರೀನಗರ: ಜಮ್ಮು-ಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಶಂಕಿತ ಉಗ್ರರು ಪೊಲೀಸ್ ಬಳಿಯಿಂದ ಎಕೆ-47 ರೈಫಲ್ ನ್ನು ಕಿತ್ತುಕೊಂಡಿದ್ದಾರೆ.
ಒಬ್ಬ ಉಗ್ರ ರೈಫಲನ್ನು ಕಸಿದುಕೊಂಡು ಪರಾರಿಯಾಗಿದ್ದು ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗಿನ ಜಾವ ಬರಾಮುಲ್ಲಾ ಜಿಲ್ಲೆಯ ತಾವಿ ಸೇತುವೆ ಬಳಿ ಈ ಘಟನೆ ನಡೆದಿದೆ. ಜಮ್ಮು ಮತ್ತು ಹೊರವಲಯದಲ್ಲಿ ಇಂದು ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. ಹೊರಹೋಗುವ ಎಲ್ಲಾ ವಾಹನಗಳನ್ನು ಪರೀಕ್ಷೆ ಮಾಡಲಾಗುತ್ತಿದೆ.
ಗಾಯಗೊಂಡ ಪೊಲೀಸ್ ಪೇದೆಯನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಮಧ್ಯೆ, ತಪ್ಪಿಸಿಕೊಂಡಿರುವ ಉಗ್ರಗಾಮಿಗೆ ರಾಜ್ಯ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬಂಧಿತನಾದ ಉಗ್ರಗಾಮಿಯ ವಿಚಾರಣೆ ನಡೆಯುತ್ತಿದೆ.
ಈ ಉಗ್ರರು ಯಾವ ಗುಂಪಿಗೆ ಸೇರಿದವರೆಂದು ತಿಳಿದುಬಂದಿಲ್ಲ.  ಈ ಹಿಂದೆ ಕೂಡ ಉಗ್ರಗಾಮಿಗಳು ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪ್ರಕರಣಗಳು ನಡೆದಿವೆ. ಕಳೆದ ವರ್ಷವೇ ಆರು ಇಂತಹ ಪ್ರಕರಣಗಳು ನಡೆದಿವೆ. 
ಇನ್ನೊಂದು ಸುದ್ದಿ ಸಂಸ್ಧೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಉಗ್ರಗಾಮಿಗಳು ಮೌಲಾನಾ ಸೈಯದ್ ಅತರ್ ದೆಹ್ಲವಿ ಎಂಬ ದೆಹಲಿ ಮೂಲದ ಮುಸ್ಲಿಂ ಪಾದ್ರಿಯ ಖಾಸಗಿ ಭದ್ರತಾ ಅಧಿಕಾರಿ ಬಳಿಯಿಂದ ಎಕೆ-47 ರೈಫಲ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಭದ್ರತಾ ಅಧಿಕಾರಿ ಮೊಹಮ್ಮದ್ ಹನೀಫ್ ಮೇಲೆ ಮೆಣಸಿನ ಪುಡಿ ಎಸೆದು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು ಎನ್ನಲಾಗಿದೆ.
ಇನ್ನೊಂದೆಡೆ ಜಮ್ಮು-ಕಾಶ್ಮೀರದ ಬುದ್ಗಮ್ ನ ಚಡೂರಾ ಪ್ರದೇಶದಲ್ಲಿ ಕಳೆದ ರಾತ್ರಿ ಉಪ ಪೊಲೀಸ್ ಅಧೀಕ್ಷಕ ಅಬ್ದುಲ್ ಭಟ್ ಅವರ ಇಬ್ಬರು ಪುತ್ರರನ್ನು ಅಪಹರಿಸಿದ ಉಗ್ರರು ನಂತರ ಬಿಡುಗಡೆ ಮಾಡಿದ್ದಾರೆ.
ಭಟ್ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಉಗ್ರಗಾಮಿಗಳು ಮಕ್ಕಳಿಗೆ ತೊಂದರೆ ಕೊಡುವುದಾಗಿ ಬೆದರಿಸಿ ನಂತರ ಕೆಲವು ಸುತ್ತು ಗುಂಡು ಹಾರಿಸಿ ಕಾರಿನಲ್ಲಿ ಪರಾರಿಯಾಗಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com