ದೇಶದಾದ್ಯಂತ ಗೋ ಹತ್ಯೆ ನಿಷೇಧಿಸಲಿ, ಮುಸ್ಲಿಮರು ಗೋ ಮಾಂಸ ತಿನ್ನುವುದು ನಿಲ್ಲಿಸಲಿ: ಅಜಂ ಖಾನ್

ದೇಶದಾದ್ಯಂತ ಗೋವು ಸೇರಿದಂತೆ ಎಲ್ಲಾ ಪ್ರಾಣಿಗಳ ಹತ್ಯೆಯನ್ನು ನಿಷೇಧಿಸಬೇಕಿದ್ದು, ಮುಸ್ಲಿಮರು ಗೋ ಮಾಂಸ ತಿನ್ನುವುದನ್ನು ನಿಲ್ಲಿಸಬೇಕೆಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರು ಮಂಗಳವಾರ...
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್
Updated on

ನವದೆಹಲಿ: ದೇಶದಾದ್ಯಂತ ಗೋವು ಸೇರಿದಂತೆ ಎಲ್ಲಾ ಪ್ರಾಣಿಗಳ ಹತ್ಯೆಯನ್ನು ನಿಷೇಧಿಸಬೇಕಿದ್ದು, ಮುಸ್ಲಿಮರು ಗೋ ಮಾಂಸ ತಿನ್ನುವುದನ್ನು ನಿಲ್ಲಿಸಬೇಕೆಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರು ಮಂಗಳವಾರ ಆಗ್ರಹಿಸಿದ್ದಾರೆ. 

ಅಕ್ರಮ ಕಸಾಯಿಖಾನೆಗಳ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ರಮ ಕೈಗೊಂಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಗೋಹತ್ಯೆಗೆ ದೇಶದಾದ್ಯಂತ ನಿಷೇಧ ಹೇರಬೇಕು. ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಗೋ ಹತ್ಯೆ ಕಾನೂನಾಗಿದೆ ಇತರೆ ರಾಜ್ಯಗಳಲ್ಲಿ ಈ ರೀತಿಯ ಕಾನೂನುಗಳಿಲ್ಲ. ಈ ಎರಡು ರಾಜ್ಯಗಳಲ್ಲಿ ಮಾತ್ರ ಗೋ ಹತ್ಯೆ ಕಾನೂನು ಮಾಡಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ. 

ದೇಶದಲ್ಲಿ ಸರ್ಕಾರ ಏಕರೂಪ ಕಾನೂನನ್ನು ಜಾರಿಗೆ ತರಬೇಕಿದೆ. ಗೋ ಹತ್ಯೆಯನ್ನು ಅಕ್ರಮವಾಗಿ ಮಾಡಿದರೆ ತಪ್ಪು, ಕಾನೂನಾತ್ಮಕವಾಗಿ ಮಾಡಿದರೆ. ಸರಿಯೇ?...ಕಾನೂನು ಹಾಗೂ ಅಕ್ರಮ ಎಂಬುದನ್ನು ತೆಗೆದುಹಾಕಬೇಕಿದೆ. ಎಲ್ಲಾ ರೀತಿಯ ಪ್ರಾಣಿ ಹತ್ಯೆಗಳನ್ನು ನಿಲ್ಲಿಸಬೇಕು. ಯಾವುದೇ ಪ್ರಾಣಿಗಳನ್ನು ಹತ್ಯೆ ಮಾಡಬಾರದು.
 
ಜೈನ್ ಸಮುದಾಯಗಳು ಚಿಕನ್ ಹಾಗೂ ಕುರಿಗಳನ್ನು ಹತ್ಯೆ ಮಾಡಬಾರದೆಂದು ಸಲಹೆ ನೀಡುತ್ತವೆ. ಮುಸ್ಲಿಮರು ಗೋ ಮಾಂಸವನ್ನು ತಿನ್ನಲೇಬೇಕೆಂದು ಇಸ್ಲಾಂನಲ್ಲಿ ಎಲ್ಲಿಯೂ ಹೇಳಿಲ್ಲ. ಉಲೆಮಾ ಈ ಬಗ್ಗೆ ಮುಸ್ಲಿಮರಿಗೆ ಮನವಿ ಮಾಡಿಕೊಳ್ಳಬೇಕಿದ್ದು, ಮುಸ್ಲಿಮರು ಗೋಮಾಂಸ ತಿನ್ನುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com