ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆ 2016ನ್ನು ಪರಿಶೀಲಿಸುತ್ತಿರುವ ಸಂಸದೀಯ ಸ್ಥಾಯಿ ಸಮಿತಿಯು ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿರುವ ವರದಿಯು, ಮಹಾನಗರಗಳಲ್ಲಿ ಪಾದಚಾರಿಗಳು ಮತ್ತು ಮೋಟಾರೇತರ ವಾಹನಗಳು ಮುಖ್ಯರಸ್ತೆಗಳು ಮತ್ತು ಹೆದ್ದಾರಿಗಳನ್ನು ಬಳಸುವುದನ್ನು ನಿರ್ಬಂಧಿಸುವಂತೆ ಶಿಫಾರಸ್ತು ಮಾಡಿದೆ. ಇದರಿಂದ ತೀವ್ರವಾಗಿ ಕೆಂಡಾಮಂಡಲವಾಗಿರುವ 7,500ಕ್ಕೂ ಹೆಚ್ಚು ಸೈಕಲ್ ಪ್ರಿಯರು, ಇದು ಜನವಿರೋಧಿ, ಬಡವರ ವಿರೋಧಿಯಾಗಿರುವ ಜೊತೆಗೆ ತಾರತಮ್ಯದಿಂದ ಕೂಡಿರುವುದರಿಂದ ಸಮಿತಿಯ ಶಿಫಾರಸನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ ಆನ್ ಲೈನ್ ಅರ್ಜಿಗೆ ಸಹಿ ಹಾಕಿದ್ದಾರೆ.