ನವದೆಹಲಿ: ಖಾದಿ ಉತ್ತೇನಜನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಫಲ ನೀಡಿದ್ದು ಜನರಲ್ಲಿ ಖಾದಿ ಮೇಲಿನ ವ್ಯಾಮೋಹ ಹೆಚ್ಚಾಗುತ್ತಿದೆ.
ಕಡಿಮೆ ಲಾಭದಾಯಕ ಉತ್ಪನ್ನ ಎನಿಸಿದ್ದರೂ ಖಾದಿ ಮಾರಾಟ ಕಳೆದ ವರ್ಷ 50 ಸಾವಿರ ಕೋಟಿ ಗಡಿ ದಾಟಿ ದಾಖಲೆ ನಿರ್ಮಿಸಿದೆ ಎಂದು ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗ(ಕೆವಿಐಸಿ) ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ.
ಇದೇ ವೇಳೆ ಖಾದಿ ಉತ್ಪನ್ನಗಳ ಮಾರಾಟ 2,005 ಕೋಟಿ ರುಪಾಯಿ ತಲುಪಿದ್ದು ಶೇ.33ರಷ್ಟು ಏರಿಕೆ ದಾಖಲಿಸಿದೆ.