ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಿ, ಹಸುಗಳನ್ನು ದತ್ತು ತೆಗೆದುಕೊಳ್ಳಲಿ: ಆರ್ ಎಸ್ ಎಸ್ ಮುಖಂಡ

ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಿ, ಹಸುಗಳನ್ನು ದತ್ತು ತೆಗೆದುಕೊಂಡು ಸಾಕಬೇಕು ಎಂದು ಆರ್ ಎಸ್ ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಿ, ಹಸುಗಳನ್ನು ದತ್ತು ತೆಗೆದುಕೊಂು ಸಾಕಬೇಕು ಎಂದು ಆರ್ ಎಸ್ ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಆರ್ ಎಸ್ ಎಸ್ ಮುಸ್ಲಿಂ ರಾಷ್ಟ್ರೀಯ ಮಂಚ್  ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್, ಮುಸ್ಲಿಮರು ಹಸುಗಳನ್ನು ರಕ್ಷಿಸಿ, ಅವುಗಳಿಗೆ ರಕ್ಷಣೆ ನೀಡಬೇಕು, ಗೋಮಾಂಸ ಸೇವನೆ ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಇಂದ್ರೇಶ್ ಕುಮಾರ್ ಹೇಳಿಕೆಗೆ ಅನೇಕ ವಿವಿಧ ಪಕ್ಷದ ನಾಯಕರು ತೀವ್ರ ಅಸಮಾಧಾನ ವ್ಯಕ್ತ  ಪಡಿಸಿದ್ದಾರೆ. ಇನ್ನೂ ಇಂದ್ರೇಶ್ ಕುಮಾರ ಅವರ ಹೇಳಿಕೆಯನ್ನು ಆರ್ ಎಸ್ ಎಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಗೋಮಾಂಸ ಸೇವನೆ ಆಧುನೀಕತೆ ಮತ್ತು ಸಂವಿಧಾನಕ್ಕೆ ವಿರೋಧವಾದದ್ದು  ಎಂದು ಮತ್ತೊಬ್ಬ ಆರ್ ಎಸ್ ಎಸ್ ನಾಯಕ  ರಾಕೇಶ್ ಸಿನ್ಹಾ ಹೇಳಿದ್ದಾರೆ.
ಮುಸ್ಲಿಂ ಅಡಳಿತ ಅವಧಿಯಲ್ಲಿ ಮುಸಲ್ಮಾನರು ಗೋಮಾಂಸ ತಿನ್ನುತ್ತಿರಲಿಲ್ಲ, ಅವರು ಹಸುಗಳಿಗೆ ಗೌರವ ಕೊಡುತ್ತಿದ್ದರು, ಅದು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಗೆ ವಿರೋಧ ಎಂದು ಅವರು ತಿಳಿಸಿದ್ದಾರೆ.
ಇಂದ್ರೇಶ್ ಕುಮಾರ್ ಹೇಳಿಕೆಗೆ ಬೆಂಬಲ ನೀಡಿರುವ ಬಿಜೆಪಿ ಮುಸಲ್ಮಾನರು ಗೋವುಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಸಾಕಬೇಕು ಎಂದು ಸಲಹೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com