ಝಾಂಸಿ: ಜಲೌನ್ ಜಿಲ್ಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತಿಯನ್ನು ಕಟ್ಟಿಹಾಕಿ ಆತನ ಎದುರೆ ಪತ್ಮಿ ಮೇಲೆ ಎಂಟು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿ ಪೈಶಾಚಿಕ ಕೃತ್ಯ ಎಸಗಿದ್ದಾರೆ.
ಜಲೌನ್ ನಿವಾಸಿಗಳಾದ ದಂಪತಿ ಜೈಪುರದಲ್ಲಿ ಕೆಲಸ ಮಾಡುತ್ತಿದ್ದು ರೈಲಿನ ಮೂಲಕ ಔರಯಾಗೆ ಮಧ್ಯರಾತ್ರಿ ಬಂದು ತಲುಪಿದ್ದರು. ಮನೆಗೆ ತಲುಪಲು ಟ್ಯಾಕ್ಸಿಗಾಗಿ ಗಾಯುತ್ತಿದ್ದಾಗ ಅಲ್ಲಿಗೆ ಬಂದ ವಾಹನವೊಂದರ ಚಾಲಕ ಲಿಫ್ಟ್ ಕೊಡುವುದಾಗಿ ಅವರನ್ನು ಕಾರಿಗೆ ಹತ್ತಿಕೊಂಡಿದ್ದಾನೆ.
ನಂತರ ಮದ್ಯದಂಗಡಿಯೊಂದರ ಸಮೀಪ ಕಾರನ್ನು ನಿಲ್ಲಿಸಿದಾಗ ಉಳಿದ 8 ಮಂದಿ ಕಾರು ಹತ್ತಿಕೊಂಡಿದ್ದಾರೆ. ಕಾರು ಜಲೌನ್ ತಲುಪಿದಾಗ ಮಹಿಳೆಯ ಪತಿಯನ್ನು ಕಟ್ಟಿಹಾಕಿದ ದುಷ್ಕರ್ಮಿಗಳು ಆಕೆಯ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರಾ ಮಾಡಿದ್ದಾರೆ.
ಇದಾದ ನಂತರ ದಂಪತಿಗಳ ಬಳಿಯಿದ್ದ ಹಣ ಮತ್ತು ಒಡವೆಗಳನ್ನು ದೋಚಿಕೊಂಡು ಅವರನ್ನು ಹೆದ್ದಾರಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ನಂತರ ದಂಪತಿಗಳು ಮೂರು ಗಂಟೆ ಸುಮಾರಿಗೆ ಜಲೌನ್ ಗೆ ತಲುಪಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.