ಕಾಶ್ಮೀರ: ಗಡಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಅಡಗಿರುವ ಶಂಕೆ, ಕಾರ್ಯಾಚರಣೆಗಿಳಿದ ಸೇನೆ

ಗಡಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ, ದಕ್ಷಿಣ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಭಾರತೀಯ ಸೇನಾ ಪಡೆ ಕಾರ್ಯಾಚರಣೆಯನ್ನು ಆರಂಭಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಹಿಬಾಘ್(ಕಾಶ್ಮೀರ): ಗಡಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ, ದಕ್ಷಿಣ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಭಾರತೀಯ ಸೇನಾ ಪಡೆ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಭಾನುವಾರ ತಿಳಿದುಬಂದಿದೆ. 
ಈ ಕುರಿತಂತೆ ಮೇಜರ್ ಜನರಲ್ ಬಿ.ಎಸ್ ರಾಜು ಅವರು ಪ್ರತಿಕ್ರಿಯೆ ನೀಡಿದ್ದು, 100ಕ್ಕೂ ಹೆಚ್ಚು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿದ್ದು, ಈ ಬಗ್ಗೆ ಮಾಹಿತಿಗಳು ತಿಳಿದುಬಂದಿದೆ. ಹೀಗಾಗಿ ಉಗ್ರರ ಸದೆಬಡಿಯಲು ಸೇನಾ ಪಡೆ ಕಾರ್ಯಾಚರಣೆ ಆರಂಭಿಸಿದೆ ಎಂದು ಹೇಳಿದ್ದಾರೆ. 
ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿಯೇ ಇದೆ. ಉಗ್ರರು ಅಡಗಿ ಕುಳಿತಿರುವುದಾಗಿ ಖಚಿತ ಮಾಹಿತಿಗಳು ತಿಳಿದುಬಂದಿದೆ. ಹೀಗಾಗಿ ಉಗ್ರರ ಸದೆಬಡಿಯಲು ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ. 
ಉಗ್ರರು ತಪ್ಪಿಸಿಕೊಳ್ಳದಂತ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸೇನೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಪ್ರಸ್ತುತ ಕಾಶ್ಮೀರದಲ್ಲಿ ಎಂದಿನಂತೆಯೇ ಪರಿಸ್ಥಿತಿಯಿದ್ದು, ಕೆಲವೆಡೆ ಮಾತ್ರ ಪ್ರತಿಭಟನೆಗಳು ನಡೆಸುತ್ತಿವೆ. ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾತ್ರ ಹಿಂಸಾಚಾರ ನಡೆಯುತ್ತಿದೆ. ಜನ ಜೀವನ ಎಂದಿನಂತೆಯೇ ಇದ್ದು, ಶೇ.95ರಷ್ಟು ಶಾಲಾ ಕಾಲೇಜುಗಳು ಸಾಮಾನ್ಯವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಸಾಕಷ್ಟು ಸರ್ಕಾರಿ ಶಾಲೆಗಳಿಗೆ ನಾನು ಭೇಟಿ ನೀಡಿದ್ದೆ. ಕೆಲ ಶಾಲೆಗಳಲ್ಲಿ ಮಾತ್ರ ಹಿಂಸಾಚಾರಗಳು ನಡೆದಿವೆ ಎಂದು ಮೇಜರ್ ಜನರಲ್ ರಾಜು ತಿಳಿಸಿದ್ದಾರೆ. 
4-5 ಗ್ರಾಮಗಳಿವೆ ಕಾಲೇಜುಗಳಿವೆ. 40-50 ವಿದ್ಯಾರ್ಥಿಗಳು ಹಿಂಸಾಚಾರ ಸೃಷ್ಟಿಸುತ್ತಿದ್ದಾರೆ. ವಿದ್ಯಾರ್ಥಿಗಳ ನಡುವೆ ಕೆಲ ವೈರಸ್ ಗಳು ಸೇರ್ಪಡೆಗೊಂಡಿದ್ದು, ಅವುಗಳನ್ನು ತೆಗೆದುಹಾಕಬೇಕಿದೆ. ಈ ಬಾರಿಯ ಬೇಸಿಗೆ ಶಾಂತಿಯುತವಾಗಿರಲಿದೆ ಎಂದು ನಂಬಿದ್ದೇನೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com