ಬಿಜೆಡಿ ಶಾಸಕ ಪ್ರದೀಪ್ ಕುಮಾರ್ ಅಮತ್ ಒಡಿಶಾ ವಿಧಾನಸಭೆ ನೂತನ ಸ್ಪೀಕರ್

ಮಾಜಿ ಸಚಿವ ಹಾಗೂ ಬಿಜೆಡಿ ಹಿರಿಯ ಶಾಸಕ ಪ್ರದೀಪ್ ಕುಮಾರ್ ಅಮತ್ ಅವರು ಒಡಿಶಾ ವಿಧಾನಸಭೆಯ ನೂತನ ಸ್ಪೀಕರ್....
ಪ್ರದೀಪ್ ಕುಮಾರ್ ಅಮತ್
ಪ್ರದೀಪ್ ಕುಮಾರ್ ಅಮತ್
Updated on
ಭುವನೇಶ್ವರ: ಮಾಜಿ ಸಚಿವ ಹಾಗೂ ಬಿಜೆಡಿ ಹಿರಿಯ ಶಾಸಕ ಪ್ರದೀಪ್ ಕುಮಾರ್ ಅಮತ್ ಅವರು ಒಡಿಶಾ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಮಂಗಳವಾರ ಆಯ್ಕೆಯಾಗಿದ್ದಾರೆ.
ಕಳೆದ ಮೇ 6ರಂದು ಹಣಕಾಸು ಹಾಗೂ ಆರೋಗ್ಯ ಖಾತೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಅಮತ್ ಅವರು ಈಗ ಎರಡನೇ ಬಾರಿ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಅಮತ್ ಅವರು ಈ ಹಿಂದೆ ಮೇ 25, 2009ರಿಂದ ಮೇ 20, 2014ರ ವರೆಗೆ ಒಡಿಶಾ ವಿಧಾನಸಭೆ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.
ಸ್ಪೀಕರ್ ಆಗಿದ್ದ ನಿರಂಜನ್ ಪೂಜಾರಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅವರಿಂದ ತೆರವಾದ ಸ್ಪೀಕರ್ ಸ್ಥಾನಕ್ಕೆ ಇಂದು ಅಮತ್ ಅವರು ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com