ಚೀನಾ
ಚೀನಾ

ಒಬಿಒಆರ್ ಗೆ ಭಾರತದ ವಿರೋಧ ತೋರ್ಪಡಿಕೆಯಷ್ಟೇ: ಚೀನಾ ಪತ್ರಿಕೆ

ಭಾರತ ಚೀನಾದ ಒನ್ ಬೆಲ್ಟ್ ಒನ್ ರೋಡ್ ಸಮ್ಮೇಳನದಲ್ಲಿ ಭಾಗವಹಿಸದೇ ಇರುವುದರ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಲೇಖನ ಪ್ರಕಟಿಸಿದೆ.
Published on
ಬೀಜಿಂಗ್: ಭಾರತ ಚೀನಾದ ಒನ್ ಬೆಲ್ಟ್ ಒನ್ ರೋಡ್ ಸಮ್ಮೇಳನದಲ್ಲಿ ಭಾಗವಹಿಸದೇ ಇರುವುದರ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಲೇಖನ ಪ್ರಕಟಿಸಿದ್ದು, ಒಬಿಒಆರ್ ಗೆ ಭಾರತದ ವಿರೋಧ ಕೇವಲ ಸ್ಥಳೀಯ ರಾಜಕಾರಣಕ್ಕಾಗಿ  ತೋರ್ಪಡಿಕೆಯಷ್ಟೇ ಎಂದು ಹೇಳಿದೆ. 
ಚೀನಾದೊಂದಿಗಿನ ದ್ವಿಪಕ್ಷೀಯ ಬಾಂಧವ್ಯವನ್ನು ಉತ್ತಮಗೊಳಿಸಲು ಭಾರತ ಸಿದ್ಧವಿದೆ, ಅದೇ ಸಮಯದಲ್ಲಿ ತನಗೆ ಚೀನ ವಿಶೇಷ ಸ್ಥಾನಮಾನಗಳನ್ನು ನೀಡಬೇಕೆಂದು ಭಾರತ ಅಪೇಕ್ಷಿಸುತ್ತದೆ. ಆದರೆ ಇದು ಸಾಮಾನ್ಯವಾಗಿ ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧದ ರೀತಿಯಲ್ಲ ಎಂದು ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್ ಹೇಳಿದೆ. 
ಒಆರ್ ಒಬಿಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿರುವುದು ಚೀನಾ ಮೇಲೆ ಒತ್ತಡ ಹೇರುವುದಕ್ಕೆ ಹಾಗೂ ಕೇವಲ ತೋರ್ಪಡಿಕೆಗಷ್ಟೇ. ಭಾರತದ ಗೈಹಾಜರಿಯಲ್ಲೂ ಒಆರ್ ಒಬಿ ಗೆ ಸಭೆ ಯಶಸ್ವಿಯಾಯಿತು ಎಂದು ಗ್ಲೋಬಲ್ ಟೈಮ್ಸ್ ಹೇಳಿದ್ದು, ಕೆಲವೊಮ್ಮೆ ಎರಡು ಶಕ್ತಿಶಾಲಿ ರಾಷ್ಟ್ರಗಳು ಪರಸ್ಪರ ಎಲ್ಲವನ್ನೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಪರಸ್ಪರ ಭಿನ್ನಾಭಿಪ್ರಾಯಗಳ ನಡುವೆಯೂ ಉತ್ತಮ ದ್ವಿಪಕ್ಷೀಯ ಸ್ನೇಹವನ್ನು ಕಾಯ್ದುಕೊಳ್ಳಬಹುದು ಎಂಬುದಕ್ಕೆ ಚೀನಾ-ಅಮೆರಿಕ ಅತ್ಯುತ್ತಮ ಉದಾಹರಣೆ, ಬಹುಶಃ ಭಾರತ ಇದರಿಂದ ಕಲಿಯಬೇಕಿದೆ ಎಂದು ಸಲಹೆ ನೀಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com