ಕೋಲ್ಕತಾ: ಮಸೀದಿಗೆ ತೆರಳಿದ್ದ ಇಮಾಮ್ ಬರ್ಕಾತಿ ಮೇಲೆ ಹಲ್ಲೆ

ಮಸೀದಿಗೆ ತೆರಳಿದ್ದ ಇಮಾಮ್ ಸೈಯದ್ ನೂರ್-ಉರ್-ರೆಹಮಾನ್ ಬರ್ಕಾತಿ ಅವರ ಹಲ್ಲೆ ನಡೆಸಿರುವ ಘಟನೆಯೊಂದು ಶುಕ್ರವಾರ ನಡೆದಿದೆ...
ಇಮಾಮ್ ಸೈಯದ್ ನೂರ್-ಉರ್-ರೆಹಮಾನ್ ಬರ್ಕಾತಿ
ಇಮಾಮ್ ಸೈಯದ್ ನೂರ್-ಉರ್-ರೆಹಮಾನ್ ಬರ್ಕಾತಿ
Updated on: 
ಕೋಲ್ಕತಾ: ಮಸೀದಿಗೆ ತೆರಳಿದ್ದ ಇಮಾಮ್ ಸೈಯದ್ ನೂರ್-ಉರ್-ರೆಹಮಾನ್ ಬರ್ಕಾತಿ ಅವರ ಹಲ್ಲೆ ನಡೆಸಿರುವ ಘಟನೆಯೊಂದು ಶುಕ್ರವಾರ ನಡೆದಿದೆ. 
ಕೋಲ್ತಾದ ಟಿಪ್ಪು ಸುಲ್ತಾನ್ ಮಸೀದಿಗೆ ನಮಾಜ್ ಮಾಡಲು ಬರ್ಕಾತಿಯವರು ತೆರಳಿದ್ದರು. ಈ ವೇಳೆ ಸ್ಥಳಕ್ಕೆ ಬಂದಿರುವ ಗುಂಪೊಂದು ಬರ್ಕಾತಿಯವರ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದೆ. ಕೂಡಲೇ ಮಸೀದಿಯಿಂದ ಹೊರಗೆ ಹೋಗುವಂತೆ ಆಗ್ರಹಿಸಿದೆ. ಈ ವೇಳೆ ಕೆಲವರು ಬರ್ಕಾತಿಯವರ ಮೇಲೆ ಹಲ್ಲೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ಕೆಲವರು ಹಿಂದಿನಿಂದ ನನ್ನ ತಲೆ ಮೇಲೆ ಹೊಡೆದರು. ರಾಷ್ಟ್ರೀಯ ಸ್ವಯಂಸೇವಕ ಸಂಘಟ ಸದಸ್ಯರೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮಸೀದಿ ಸಮಿತಿಯಲ್ಲಿ ಪ್ರಸ್ತುತ ನಿರ್ಮಾಣವಾಗಿರುವ ಪರಿಸ್ಥಿತಿಯನ್ನು ಆರ್'ಎಸ್ಎಸ್ ಸಂಘಟನೆಯವರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಬರ್ಕಾತಿ ಹೇಳಿದ್ದಾರೆ. 
ಅನ್ಯಾಯ ವಿರುದ್ಧ ಹಾಗೂ ಹಕ್ಕುಗಳು ಕುರಿತಂತೆ ದನಿ ಎತ್ತಿದ್ದಕ್ಕೆ ನನ್ನ ಮೇಲೆ ದಾಳಿ ನಡೆಸಲಾಗಿದೆ. ಇಂತಹ ಆರ್'ಎಸ್ಎಸ್ ಇಂತಹ ಕೆಟ್ಟ ಆಟಗಳನ್ನಾಡುತ್ತದೆ. ನನಗೆ ಇಂದು ಬಹಳ ಅವಮಾನವಾಗಿದೆ ಎಂದು ತಿಳಿಸಿದ್ದಾರೆ. 
ಕೋಲ್ಕತಾ ಟಿಪ್ಪು ಸುಲ್ತಾನ್ ಮಸೀದಿಯ ವಿವಾದಿತ ಮೌಲ್ವಿ ನೂರ್ ಉರ್ ರೆಹಮಾನ್ ಬರ್ಕಾತಿ ಅವರು ನೀಡಿದ್ದ ದೇಶ ವಿರೋಧಿ ಹೇಳಿಕೆ ಹಾಗೂ ಸ್ಥಾನಮಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪದ ಮೇರೆಗೆ ಕೆಲ ದಿನಗಳ ಹಿಂದಷ್ಟೇ ಮಸೀದಿಯಿಂದ ವಜಾ ಮಾಡಲಾಗಿತ್ತು. 
ಇತ್ತೀಚೆಗೆ ಬರ್ಕಾತಿಯವರು ನಿಷೇಧದ ನಡುವೆಯೂ ಕಾರಿನ ಮೇಲೆ ಕೆಂಪು ದೀಪ ಹಾಕಿ ಓಡಾಡಿದ್ದರು. ಮಸೀದಿ ಹೊರಗೆ ಜೈಶ್ರೀರಾಂ ಎನ್ನುವವರು ಹಿಜಡಾಗಳು, ಬಿಜೆಪಿ ಸೇರುವ ಮುಸ್ಲಿಮರನ್ನು ಥಳಿಸುವೆ ಎಂದು ಹೇಳಿದ್ದರು. ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆಯೂ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದರು. ಆದರೆ, ನನ್ನನ್ನು ವಜಾಗೊಳಿಸಿರುವ ಕ್ರಮ ಕಾನೂನುಬದ್ಧವಲ್ಲ. ನಾನು ಹುದ್ದೆ ಬಿಡಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com