ಗೋಮಾತೆಯನ್ನು ರಾಷ್ಟ್ರ ಪ್ರಾಣಿಯಾಗಿ ಘೋಷಿಸಿ: ಕೇಂದ್ರಕ್ಕೆ ಜೆಡಿ(ಯು)

ಗೋಮಾತೆಯನ್ನು ರಾಷ್ಟ್ರ ಪ್ರಾಣಿಯಾಗಿ ಘೋಷಣೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಜನತಾ ದಳ (ಸಂಯುಕ್ತ) ಶನಿವಾರ ಆಗ್ರಹಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಾಟ್ನ: ಗೋಮಾತೆಯನ್ನು ರಾಷ್ಟ್ರ ಪ್ರಾಣಿಯಾಗಿ ಘೋಷಣೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಜನತಾ ದಳ (ಸಂಯುಕ್ತ) ಶನಿವಾರ ಆಗ್ರಹಿಸಿದೆ. 
ದೇಶದಾದ್ಯಂತ ಗೋ ಹತ್ಯೆಗೆ ನಿಷೇಧ ಹೇರಿರುವ ಕೇಂದ್ರ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೆಡಿ(ಯು) ಹಿರಿಯ ನಾಯಕ ನೀರಜ್ ಕುಮಾರ್ ಅವರು, ಗೋವುಗಳ ಮೇಲೆ ಕೇಂದ್ರ ಸರ್ಕಾರಕ್ಕೆ ನಿಜಕ್ಕೂ ಅಷ್ಟೊಂದು ಪ್ರೀತಿ ಇರುವುದೇ ಆದರೆ, ಗೋವನ್ನು ರಾಷ್ಟ್ರ ಪ್ರಾಣಿಯಾಗಿ ಘೋಷಣೆ ಮಾಡಲಿ ಎಂದು ಹೇಳಿದ್ದಾರೆ. 
ಗೋಹತ್ಯೆ ನಿಷೇಧ ಕುರಿತಂತೆ ನಿನ್ನೆಯಷ್ಟೇ ಮಾತನಾಡಿದ್ದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಹರ್ಷ ವರ್ಧನ್ ಅವರು, ಪ್ರಾಣಿ ಕಲ್ಯಾಣ ಕಾಯ್ದೆ 2017ರ ಪ್ರಕಾರ, ಗೋಹತ್ಯೆ ಉದ್ದೇಶಕ್ಕೆ ಹಸುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. 
ಕಾಯ್ದೆಯಲ್ಲಿ ನಿಯಮಗಳು ಸ್ಪಷ್ಟವಾಗಿದ್ದು, ಗೋವುಗಳ ಕಲ್ಯಾಣಕ್ಕಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಹೊಸ ನಿಯಮಗಳನ್ನು ಸ್ಥಳೀಯ ಹಂತದ ಪ್ರಾಣಿಗಳ ಮಾರುಕಟ್ಟೆ ಸಮಿತಿಗಳಿಗೂ ಕಳುಹಿಸಲಾಗಿದೆ. ಗೋಹತ್ಯೆ ಉದ್ದೇಶದಿಂದ ಮಾರಾಟಗಾರರಾಗಲೀ ಅಥವಾ ಗ್ರಾಹಕರಾಗಲೀ ಕೊಳ್ಳುವಂತಿಲ್ಲ. ಧಾರ್ಮಿಕ ಉದ್ದೇಶಗಳಿಂದರೂ ಪ್ರಾಣಿಗಳನ್ನು ಕೊಳ್ಳುವಂತಿಲ್ಲ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com