ಬಿಹಾರ: ಕಾರ್ತಿಕ ಪೌರ್ಣಮಿ ಆಚರಣೆ ವೇಳೆ ಕಾಲ್ತುಳಿತ, 3 ಸಾವು, ಹಲವರಿಗೆ ಗಾಯ

ಕಾರ್ತಿಕ ಮಾಸದ ದೊಡ್ಡ ಪೌರ್ಣಮಿ ಆಚರಣೆ ವೇಳೆ ಕಾಲ್ತುಳಿತ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿ, ಹಲವರು ಜನರಿಗೆ ಗಾಯವಾಗಿರುವ ಘಟನೆ ಬಿಹಾರ ರಾಜ್ಯದ ಬೇಗುಸರಾಯ್ ಜಿಲ್ಲೆಯಲ್ಲಿ...
ಬಿಹಾರ: ಕಾರ್ತಿಕ ಪೌರ್ಣಮಿ ಆಚರಣೆ ವೇಳೆ ಕಾಲ್ತುಳಿತ, 3 ಸಾವು, ಹಲವರಿಗೆ ಗಾಯ
ಬಿಹಾರ: ಕಾರ್ತಿಕ ಪೌರ್ಣಮಿ ಆಚರಣೆ ವೇಳೆ ಕಾಲ್ತುಳಿತ, 3 ಸಾವು, ಹಲವರಿಗೆ ಗಾಯ
Updated on
ಪಾಟ್ನ: ಕಾರ್ತಿಕ ಮಾಸದ ದೊಡ್ಡ ಪೌರ್ಣಮಿ ಆಚರಣೆ ವೇಳೆ ಕಾಲ್ತುಳಿತ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿ, ಹಲವರು ಜನರಿಗೆ ಗಾಯವಾಗಿರುವ ಘಟನೆ ಬಿಹಾರ ರಾಜ್ಯದ ಬೇಗುಸರಾಯ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. 
ಕಾರ್ತಿಕ ಪೌರ್ಣಿಮಿ ಆಚರಣೆ ಹಿನ್ನಲೆಯಲ್ಲಿ ಸಾವಿರಾರು ಭಕ್ತರು ಗಂಗಾ ನದಿಯ ಸಿಮಾರಿಯಾ ಘಾಟ್'ನಲ್ಲಿ ಸ್ನಾನ ಮಾಡಲು ಒಟ್ಟು ಸೇರಿದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. 
ಸಿಮಾರಿಯಾ ಘಾಟ್ ಬಳಿಯಿದ್ದ ಕೆಲ ಕಿಡಿಗೇಡಿಗಳು ವದಂತಿಗಳು ಹಬ್ಬುವಂತೆ ಮಾಡಿದ್ದಾರೆ. ಪರಿಣಾಮ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com