ಪ್ಯಾರಡೈಸ್ ಪೇಪರ್ಸ್: ಕಾನೂನು ಬಾಹಿರ ವ್ಯವಹಾರ ಮಾಡಿಲ್ಲ: ಜಯಂತ್ ಸಿನ್ಹಾ!

ವಿಶ್ವಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ 'ಪ್ಯಾರಡೈಸ್ ಪೇಪರ್ಸ್' ಪ್ರಕರಣದಲ್ಲಿ ತಮ್ಮ ಹೆಸರು ತಳುಕುಹಾಕಿಕೊಂಡಿರುವ ಕುರಿತು ಕೇಂದ್ರ ಸಚಿವ ಜಯಂತ್ ಸಿನ್ಹಾ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಶ್ವಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ 'ಪ್ಯಾರಡೈಸ್ ಪೇಪರ್ಸ್' ಪ್ರಕರಣದಲ್ಲಿ ತಮ್ಮ ಹೆಸರು ತಳುಕುಹಾಕಿಕೊಂಡಿರುವ ಕುರಿತು ಕೇಂದ್ರ ಸಚಿವ ಜಯಂತ್ ಸಿನ್ಹಾ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ನಾನು ಯಾವುದೇ ರೀತಿಯ ವ್ಯವಹಾರವನ್ನು ಕಾನೂನು ಬಾಹಿರವಾಗಿ ಮಾಡಿಲ್ಲ. ಎಲ್ಲಕ್ಕೂ ಸೂಕ್ತ ದಾಖಲೆಗಳಿವೆ. ಈ ಯಾವುದೇ ವ್ಯವಹಾರವನ್ನೂ ನಾನು ವೈಯಕ್ತಿಕ  ಲಾಭಕ್ಕಾಗಿ ಮಾಡಿಲ್ಲ" ಎಂದು ಜಯಂತ್ ಸಿನ್ಹಾ ಸಮಜಾಯಿಷಿ ನೀಡಿದ್ದಾರೆ.
ಜಯಂತ್ ಸಿನ್ಹಾ ಅವರು ಒಮಿದ್ಯಾರ್ ನೆಟ್ವರ್ಕ್ ಸಂಸ್ಥೆಯೊಂದಿಗೆ ಒಪ್ಪಂದ ಮೇರೆಗೆ ಭಾರತದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅಮೆರಿಕ ಮೂಲದ ಡಿ ಲೈಟ್ ಡಿಸೈನ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ  ಎಂದು ಪ್ಯಾರಡೈಸ್ ಪೇಪರ್ಸ್ ನಲ್ಲಿ ದಾಖಲಾಗಿದೆ.
ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಜಯಂತ್ ಸಿನ್ಹಾ ಅವರು, ತಮ್ಮ ವೈಯುಕ್ತಿಕ ಕಾರಣಕ್ಕೆ ತಾವು ಯಾವುದೇ ಸಂಸ್ಥೆಯಲ್ಲೂ ಹೂಡಿಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com