ಸರ್ಕಾರದ ಅಸಮರ್ಥತೆ ಬಿಂಬಿಸುವುದನ್ನು ನಿಲ್ಲಿಸುವುದಿಲ್ಲ: ವ್ಯಂಗ್ಯ ಚಿತ್ರಕಾರ ಬಾಲಾ

ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ, ತಿರುನಲ್ವೇಲಿ ಪೊಲೀಸ್ ಆಯುಕ್ತ, ಜಿಲ್ಲಾಧಿಕಾರಿ ಬಗ್ಗೆ ವ್ಯಂಗ್ಯ ಚಿತ್ರ ರಚಿಸಿ ಬಂಧನಕ್ಕೀಡಾಗಿದ್ದ ಖ್ಯಾತ ವ್ಯಂಗ್ಯ ಚಿತ್ರಕಲಾವಿದ ಜಿ ಬಾಲಕೃಷ್ಣನ್ ರನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಜಾಮೀನಿನ ಮೇಲೆ ಬಿಡುಗಡೆಯಾದ ವ್ಯಂಗ್ಯಚಿತ್ರಕಾರ ಬಾಲಾ
ಜಾಮೀನಿನ ಮೇಲೆ ಬಿಡುಗಡೆಯಾದ ವ್ಯಂಗ್ಯಚಿತ್ರಕಾರ ಬಾಲಾ
ತಿರುನಲ್ವೇಲಿ: ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ, ತಿರುನಲ್ವೇಲಿ ಪೊಲೀಸ್ ಆಯುಕ್ತ, ಜಿಲ್ಲಾಧಿಕಾರಿ ಬಗ್ಗೆ ವ್ಯಂಗ್ಯ ಚಿತ್ರ ರಚಿಸಿ ಬಂಧನಕ್ಕೀಡಾಗಿದ್ದ ಖ್ಯಾತ ವ್ಯಂಗ್ಯ ಚಿತ್ರಕಲಾವಿದ ಜಿ ಬಾಲಕೃಷ್ಣನ್ ರನ್ನು ನ್ಯಾಯಾಲಯ  ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಾ, ಬಂಧನದ ಹೊರತಾಗಿಯೂ ತಾವು ಸರ್ಕಾರದ ಅಸಮರ್ಥತೆಯನ್ನು ತೋರಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ  ತಮ್ಮ ಬಂಧನದ ಕುರಿತು ಮಾತನಾಡಿದ ಬಾಲಾ, ನಾನೇನು ಕೊಲೆ ಮಾಡಿಲ್ಲ. ನನ್ನ ಕೆಲಸದ ಬಗ್ಗೆ ನನಗೆ ಯಾವುದೇ ಕಾರಣಕ್ಕೂ ವಿಷಾಧವಿಲ್ಲ. ಬದಲಿಗೆ ಹೆಮ್ಮೆ ಇದೆ. ಬಂಧನದದ ಹೊರತಾಗಿಯೂ ಸರ್ಕಾರದ  ಅಸಮರ್ಥತೆಯನ್ನು ಕಾರ್ಟೂನ್ ಮೂಲಕ ತೋರಿಸುವುದನ್ನು ನಾನು ನಿಲ್ಲಿಸುವುದಿಲ್ಲ ಎಂದು ಬಾಲಾ ಹೇಳಿದ್ದಾರೆ.
ಕುಟುಂಬವೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕೃಷ್ಣನ್ ಅವರು ಮುಖ್ಯಮಂತ್ರಿ ಪಳನಿಸ್ವಾಮಿ, ತಿರುನಲ್ವೇಲಿ ಪೊಲೀಸ್ ಆಯುಕ್ತ, ಜಿಲ್ಲಾಧಿಕಾರಿ ಬಗ್ಗೆ ಆಕ್ಷೇಪಾರ್ಹ ವ್ಯಂಗ್ಯ ಚಿತ್ರ  ರಚಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವ್ಯಂಗ್ಯ ಚಿತ್ರ ವೈರಲ್ ಆಗಿ, ಈಗ ವ್ಯಂಗ್ಯ ಚಿತ್ರ ರಚಿಸಿದ್ದ ಬಾಲಕೃಷ್ಣನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ನಿನ್ನೆ ಸಂಜೆಯೇ ಬಾಲಾ ಅವರನ್ನು ಬಂಧಿಸಲಾಗಿತ್ತು. ಇದೀಗ  ತಿರುನಲ್ವೇಲಿ ಕೋರ್ಟ್ ಬಾಲಾ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಈ ಬಗ್ಗೆ ನಿನ್ನೆಯೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ಬಾಲಾ, ಅತ್ಯಂತ ಕೋಪದಿಂದ ಈ ವ್ಯಂಗ್ಯಚಿತ್ರವನ್ನು ರಚಿಸಿದ್ದೇನೆ ಎಂದು ಹೇಳಿದ್ದರು. 
ಆದರೆ ಈ ವ್ಯಂಗ್ಯ ಚಿತ್ರ ತಮಿಳುನಾಡು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ಸಂದೀಪ್  ನಂದೂರಿ, " ನಾನು ಟೀಕೆಯ ವಿರುದ್ಧವಾಗಿಲ್ಲ. ಆದರೆ ವ್ಯಂಗ್ಯ ಚಿತ್ರಕಾರರು ಘಟನೆಯ  ವಾಸ್ತವಾಂಶಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಮುಖ್ಯಮಂತ್ರಿ, ಪೊಲೀಸ್ ಆಯುಕ್ತ, ಜಿಲ್ಲಾಧಿಕಾರಿಯ ಬಗ್ಗೆ ಅವಮಾನಕರ ರೀತಿಯಲ್ಲಿ ವ್ಯಂಗ್ಯಚಿತ್ರ ರಚಿಸಿದ್ದಾರೆ. ಲಂಚ ಸ್ವೀಕರಿಸಿದ ಪ್ರಕರಣದ ಬಗ್ಗೆ ಮೌನ ವಹಿಸಿದ್ದೇವೆ  ಎಂಬ ತಪ್ಪು ಸಂದೇಶವನ್ನು ಜನತೆಗೆ ರವಾನಿಸುತ್ತದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com