ಪಾಂಡರಕ್: ಪ್ರವಾಸಕ್ಕೆಂದು ಬಂದಿದ್ದ ಬ್ರಿಟೀಷ್ ದಂಪತಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿರುವ ಘಟನೆ ಬಿಹಾರ ಪಾಂಡರಕ್ ನಲ್ಲಿ ಮಂಗಳವಾರ ನಡೆದಿದೆ.
ಗಂಗಾ ನದಿ ತೀರದ ಬಳಿ ಬ್ರಿಟೀಷ್ ದಂಪತಿಗಳು ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ದಂಪತಿಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವ ಕಿಡಿಗೇಡಿಗಳು ಅವರ ಬಳಿಯಿದ್ದ ವಸ್ತುಗಳನ್ನು ದರೋಡೆ ಮಾಡಲು ಯತ್ನಿಸಿದ್ದಾರೆಂದು ತಿಳಿದುಬಂದಿದೆ.
ದರೋಡೆ ಮಾಡಲು ದುಷ್ಕರ್ಮಿಗಳು ಯತ್ನಿಸುತ್ತಿದ್ದಂತೆ ಬ್ರಿಟೀಷ್ ಪ್ರಜೆ ಮ್ಯಾಥ್ಯೂ ಅವರು ಬೋಟ್ ಸಹಾಯದೊಂದಿಗೆ ಸ್ಥಳದಿಂದ ನದಿಯನ್ನು ದಾಟಿದ್ದಾರೆ. ಬಳಿಕ ಗ್ರಾಮವೊಂದರ ಬಳಿ ಹೋಗಿ ಪೊಲೀಸರಿಗೆ ದೂರು ನೀಡಲಾಯಿತು ಎಂದು ಮ್ಯಾಥ್ಯೂ ಅವರು ಹೇಳಿಕೊಂಡಿದ್ದಾರೆ.
ಬ್ರಿಟೀಷ್ ದಂಪತಿಗಳಿಂದ ದುಷ್ಕರ್ಮಿಗಳು ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಾಟ್ನ ಹಿರಿಯ ಪೊಲೀಸ್ ಅಧಿಕಾರಿ ಮನು ಮಹರಾಜ್ ಅವರು ಹೇಳಿದ್ದಾರೆ.