ದೇಶ

ನೋಟು ನಿಷೇಧ ಕಾಳಧನಿಕರಿಗೆ ಬಿಸಿ ತುಪ್ಪವಾಗಿತ್ತು: ಅರುಣ್ ಜೇಟ್ಲಿ

ನೋಟು ನಿಷೇಧ ಕಾಳಧನಿಕರಿಗೆ ಬಿಸಿ ತುಪ್ಪವಾಗಿತ್ತು: ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Published On :
ನವದೆಹಲಿ: ದೇಶದಲ್ಲಿ ನೋಟು ನಿಷೇಧಗೊಂಡು ನಾಳೆಗೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನೋಟು ನಿಷೇಧ ಹಾಗೂ ಜಿಎಸ್ಟಿಯಂಥ ಪರಿಣಾಮಕಾರಿ ಆರ್ಥಿಕ ಸುಧಾರಣೆಗಳ ಮೂಲಕ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಇಡೀದ ದೇಶದ ನಾಗರಿಕರ ಹಿತಾಸಕ್ತಿಯನ್ನು ಕಾಪಾಡಿದೆ ಎಂದು ಹೇಳಿದ್ದಾರೆ. 
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ ಅವರು ನೋಟು ನಿಷೇಧ ನಿರ್ಧಾರವನ್ನು ವಿರೋಧಿಸುತ್ತಿರುವವರೆಲ್ಲರೂ ಕಪ್ಪು ಹಣ ದಂಧೆಯಲ್ಲಿರುವವರು. ಹೀಗಾಗಿ ಕೆಲವು ಪಕ್ಷಗಳಿಗೆ ಈ ನಿರ್ಧಾರ ಕಹಿಯಾಗಿದೆ. ಆದರೆ ದೇಶದ ಕೋಟ್ಯಂತರ ಜನರ ಪಾಲಿಗೆ ಇದು ವರದಾನವಾಗಿ ಪರಿಣಮಿಸಿದೆ ಎಂದರು. 
ನೋಟು ನಿಷೇಧದಿಂದಾಗಿ ನಗದು ವಹಿವಾಟು ಪ್ರಮಾಣ ಕಡಿಮೆಯಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಉಗ್ರರಿಗೆ ರವಾನೆಯಾಗುತ್ತಿದ್ದ ಕೋಟಿ ಕೋಟಿ ಹಣಕ್ಕೆ ಕಡಿವಾಣ ಬಿದ್ದಿದೆ. ಈ ಮೊದಲು ಕಪ್ಪು ಹಣವು ಉಗ್ರ ಸಂಘಟನೆಗಳಿಗೆ ರವಾನೆಯಾಗುತ್ತಿತ್ತು. ಅದೀಗ ಸಂಪೂರ್ಣ ಸ್ಧಗಿತಗೊಂಡಿದೆ ಎಂದು ಜೇಟ್ಲಿ ಹೇಳಿದರು. 
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೆಲ ನಿರ್ಧಾರಗಳು ಯಾವುದೇ ಪರಿಣಾಮ ಬೀರಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಆರ್ಥಿಕ ಸುಧಾರಣೆ ಕ್ರಮಗಳಿಗೆ ಇಡೀ ವಿಶ್ವವೇ ತಲೆದೂಗಿದೆ ಎಂದರು. ಇನ್ನು ನೋಟು ನಿಷೇಧವನ್ನು ಪ್ರತಿಪಕ್ಷಗಳು ಲೂಟಿ ಎಂದು ಬಣ್ಣಿಸುತ್ತಿವೆ. ಹಾಗಾದರೆ 2ಜಿ ಹಗರಣ, ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣ, ಕಲ್ಲಿದ್ದಲು ಗಣಿ ಹಂಚಿಕೆ ಹಗರಣವನ್ನು ಏನೆನ್ನಬೇಕು. ಅವರುಗಳು ಮಾಡಿದ್ದು ಲೂಟಿ ಆದರೆ ನಾವು ಮಾಡಿದ್ದು ಸುಧಾರಣೆ ಕ್ರಮ ಎಂದು ಕಾಂಗ್ರೆಸ್ ಗೆ ಜೇಟ್ಲಿ ತಿರುಗೇಟು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.