ಶನಿವಾರ ಶ್ರೀನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಸ್ವತಂತ್ರ್ಯ ಕಾಶ್ಮೀರ ಕಲ್ಪನೆ ವಾಸ್ತವಿಕತೆ ಅಲ್ಲ. ನಾವು ಮೂರು ದೇಶಗಳಿಂದ ಸುತ್ತು ವರೆದಿದ್ದೇವೆ, ಇತ್ತ ಪಾಕಿಸ್ತಾನ ಅತ್ತ ಚೀನಾ ಹಾಗೂ ಮೂರನೆಯದಾಗಿ ಭಾರತದಿಂದ ಸುತ್ತುವರೆಯಲ್ಪಟ್ಟಿದ್ದೇವೆ. ಮೂರೂ ದೇಶಗಳೂ ಅಣ್ವಸ್ತ್ರಗಳನ್ನು ಹೊಂದಿವೆ. ಆದರೆ ನಮ್ಮ ಬಳಿ ಅಲ್ಲಾ ಎಂಬ ಹೆಸರನ್ನು ಹೊರತು ಪಡಿಸಿ ಬೇರೇನೂ ಇಲ್ಲ. ಸ್ವತಂತ್ರ್ಯ ಕಾಶ್ಮೀರ ಕಲ್ಪನೆಯೇ ತಪ್ಪು ಎಂದು ಹೇಳಿದ್ದಾರೆ.