ದೆಹಲಿ: ರಾಜಧಾನಿ ನವದೆಹಲಿ ಮತ್ತೆ ಗ್ಯಾಂಗ್‍ವಾರ್‍ನಿಂದ ಬೆಚ್ಚಿ ಬಿದ್ದಿದೆ. ರೋಹಿಣಿ ಕೋರ್ಟ್ ಆವರಣದಲ್ಲೇ ಎರಡು ರೌಡಿಗಳ ಗುಂಪಿನ ನಡುವೆ ನಡೆದ ಭೀಕರ ಘರ್ಷಣೆ ನಡೆದಿದೆ.
ಕೋರ್ಟ್ ಆವರಣದಲ್ಲಿ ನಡೆಜ ಫೈರಿಂಗ್ ನಲ್ಲಿ ಓರ್ವ ವಿಚಾರಣಾಧೀನ ಕೈದಿ ಸಾವನ್ನಪ್ಪಿದ್ದಾನೆ. ಕೆಲವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಗುಂಡು ಹಾರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗ್ಗೆ 11.20 ವೇಳೆಗೆ ಅಪರಾಧ ಪ್ರಕರಣವೊಂದರ ವಿಚಾರಣೆಗಾಗಿ ಕೋರ್ಟ್‍ಗೆ ಆರೋಪಿಯೊಬ್ಬನನ್ನು ಕರೆತಂದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗ್ಯಾಂಗ್‍ವಾರ್ ನಡೆಯಿತು. ಈ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಹಾರಿಸಿದ ಗುಂಡಿನಿಂದ ವ್ಯಕ್ತಿಯೊಬ್ಬ ಮೃತಪಟ್ದಿದ್ದಾನೆ.
ವಿನೋದ್ ಎಂಬಾತ ಮೃತ ವ್ಯಕ್ತಿ. ಗಾಯಾಳವನ್ನು ಸಮೀಪದ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಪರಿಶೀಲಿಸಿದ ವೈದ್ಯರು ಆತ ಮೃತ ಪಟ್ಟಿರುವುದಾಗಿ ಘೋಷಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಎರಡನೇ ಘಟನೆಯಾಗಿದ್ದು, ಕಳೆದ ಎಪ್ರಿಲ್ ನಲ್ಲಿ 38 ವರ್ಷದ ವಿಚಾರಾಧೀನ ಕೈದಿಯೊಬ್ಬನನ್ನು ಶೂಟ್ ಮಾಡಿ ಕೊಲ್ಲಲಾಗಿತ್ತು.