ಚೈಲ್ಡ್ ಪ್ರೊಟೆಕ್ಷನ್ ಟೀಮ್ ಎಂಬ ತಂಡವೂ ಇದಕ್ಕೆ ಸಹಾಯಹಸ್ತ ಚಾಚಿತು. ಅಗಲ ಕಿರಿದಾದ ರಸ್ತೆಯನ್ನು ಈ ಮಗುವಿನ ಪ್ರಾಣ ಉಳಿಸುವ ಸಲುವಾಗಿ ತೆರವುಗೊಳಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿಗಳನ್ನು ಪಸರಿಸಿತು. ಪೊಲೀಸ್ ಪೈಲಟ್ ವಾಹನ, ಐಸಿಯು ಆಂಬ್ಯುಲೆನ್ಸ್ ಹಾಗೂ ಎರಡು ಕಾರುಗಳು ಇದಕ್ಕೆ ಬೆಂಗಾವಲಾಗಿ ಸಂಚರಿಸಿದವು. ಕೋಝಿಕೋಡ್‌ನಲ್ಲಿ ಆಹಾರ ಮತ್ತು ಇಂಧನಕ್ಕಾಗಿ ಕೇವಲ 20 ನಿಮಿಷ ನಿಲುಗಡೆ ನೀಡಲಾಯಿತು. ಅಂತಿಮವಾಗಿ ಆ್ಯಂಬುಲೆನ್ಸ್ ಚಾಲಕ ತಮೀಮ್ 6 ಗಂಟೆ 45 ನಿಮಿಷದಲ್ಲಿ 508 ಕಿ.ಮೀ ದೂರವನ್ನು ಯಶಸ್ವಿಯಾಗಿ ಕ್ರಮಿಸಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದನು.