ಕಳೆದ ವಾರ ನಡೆದ ಮತ್ತು ರಾತ್ರಿ ನಡೆದ ಐಟಿ ದಾಳಿಯ ಹಿಂದೆ ಖಂಡಿತಾ ರಾಜಕೀಯ ಷಡ್ಯಂತ್ರ ಅಡಗಿದ್ದು, ಪಳನಿ ಸ್ವಾಮಿ, ಪನ್ನೀರ್ ಸೆಲ್ವಂ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಐಟಿ ದಾಳಿಗೆ ಕುಮ್ಮಕ್ಕು ನೀಡಿದ್ದಾರೆ. ಆ ಮೂಲಕ ಅಮ್ಮ ಅವರ ಆತ್ಮಕ್ಕೆ ಮೋಸ ಮಾಡಿದ್ದಾರೆ ಎಂದು ದಿನಕರನ್ ಹೇಳಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಕಿಡಿಕಾರಿದ ದಿನಕರನ್, ಪ್ರಧಾನಿ ನರೇಂದ್ರ ಮೋದಿ ಮತ್ತು ಜೇಟ್ಲಿ ಐಟಿ ದಾಳಿ ಮೂಲಕ ನಮ್ಮ ಕುಟುಂಬವನ್ನು ಒಡೆಯಲು ಯತ್ನಿಸಿದ್ದಾರೆ. ಐಟಿ ದಾಳಿ ನಡೆಸಿ ನಮ್ಮ ಬಣದ ಜನ ಪ್ರತಿನಿಧಿಗಳ ಬೆದರಿಸುವ ತಂತ್ರ ನಡೆಸುತ್ತಿದ್ದಾರೆ. ಪಳನಿ ಸ್ವಾಮಿ ಮತ್ತು ಪನ್ನೀರ್ ಸೆಲ್ವಂ ತಮ್ಮ ಅಧಿಕಾರದ ಆಸೆಗಾಗಿ ಯಾವುದೇ ಹಂತಕ್ಕೆ ಇಳಿಯಲು ಅವರು ಸಿದ್ಧರಾಗಿದ್ದಾರೆ ಎಂದು ಆರೋಪಿಸಿದರು.