ಶಶಿಕಲಾ ಕುಟುಂಬದಿಂದಾಗಿ ಜಯಾ ನಿವಾಸದ ಮೇಲೆ ಐಟಿ ದಾಳಿ: ಸಿಎಂ ಪಳನಿಸ್ವಾಮಿ

ದಿನಕರನ್ ವಿರುದ್ಧ ತಮಿಳುನಾಡು ಸಿಎಂ ಪಳನಿ ಸ್ವಾಮಿ ತಿರುಗೇಟು ನೀಡಿದ್ದು, ಶಶಿಕಲಾ ಮತ್ತು ಅವರ ಕುಟುಂಬದಿಂದಾಗಿಯೇ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದರು ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಐಟಿ ದಾಳಿ ಹಿನ್ನಲೆಯಲ್ಲಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಟಿಟಿವಿ ದಿನಕರನ್ ವಿರುದ್ಧ ತಮಿಳುನಾಡು ಸಿಎಂ ಪಳನಿ ಸ್ವಾಮಿ ತಿರುಗೇಟು ನೀಡಿದ್ದು, ಶಶಿಕಲಾ ಮತ್ತು ಅವರ ಕುಟುಂಬದಿಂದಾಗಿಯೇ ಜಯಲಲಿತಾ ಅವರ  ಪೋಯಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದರು ಎಂದು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಪೋಯಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿಯನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಸಿಎಂ ಪಳನಿಸ್ವಾಮಿ, ಟಿಟಿವಿ ದಿನಕರನ್ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಸಿಎಂ ಆಗಿದ್ದು  ಎಐಎಡಿಎಂಕೆ ಶಾಸಕರ ಬೆಂಬಲದಿಂದಾಗಿಯೇ ಹೊರತು ಟಿಟಿವಿ ದಿನಕರನ್ ನಿಂದಲ್ಲ. ಇಷ್ಟಕ್ಕೂ ಯಾರು ಈ ದಿನಕರನ್...10 ವರ್ಷಗಳಿಂದ ಪಕ್ಷದಿಂದ ದೂರವಿದ್ದ ಈತ ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರಿದ್ದ. ಇದೀಗ ಪಕ್ಷದಿಂದ ಆತನನ್ನು  ಹೊರಹಾಕಲ್ಪಟ್ಟಿದ್ದು, ಆತನಿಗೂ ಎಐಎಡಿಎಂಕೆ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಪಕ್ಷಕ್ಕೆ ದಿನಕರನ್ ಅವರ ಕೊಡುಗೆ ಏನೇನೂ ಇಲ್ಲ.. ಎಂದು ಹೇಳಿರುವ ಪಳನಿಸ್ವಾಮಿ, ಪೋಯಸ್ ಗಾರ್ಡನ್ ನಿವಾಸದ ಮೇಲೆ ಆಗಿರುವ ದಾಳಿಗೆ ಯಾರು ಕಾರಣ ಎಂದು ರಾಜ್ಯದ ಜನತೆಗೆ ಗೊತ್ತು. ಶಶಿಕಲಾ ಮತ್ತು  ಅವರ ಕುಟುಂಬದಿಂದಾಗಿಯೇ ಇಂದು ಜಯಲಲಿತಾ ಅವರ ನಿವಾಸಕ್ಕೆ ಐಟಿ ಆಧಿಕಾರಿಗಳು ಧಾವಿಸುವಂತಾಗಿದೆ. ಪೋಯಸ್ ಗಾರ್ಡನ್ ನಿವಾಸ ನಮಗೆ ದೇಗುಲವಿದ್ದಂತೆ..ಐಟಿ ದಾಳಿ ವೇಳೆ ಶಶಿಕಲಾ ಕೊಠಡಿಯನ್ನು ಮಾತ್ರ  ಶೋಧಿಸಲಾಗಿದ್ದು, ಜಯಲಲಲಿತಾ ಅವರ ಕೊಠಡಿಯನ್ನು ಐಟಿ ಅಧಿಕಾರಿಗಳು ಪ್ರವೇಶ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com