ಅಯ್ಯಪ್ಪ ಮಂದಿರ ಪ್ರವೇಶಿಸಲು 31 ವರ್ಷದ ಮಹಿಳೆ ಯತ್ನ!

31 ವರ್ಷದ ಮಹಿಳೆ ವಿಶ್ವವಿಖ್ಯಾತ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸುವುದಕ್ಕೆ ಯತ್ನಿಸಿದ್ದಾರೆ. ಅಯ್ಯಪ್ಪ ದೇವಾಲಯದಲ್ಲಿ 10-50 ವಯಸ್ಸಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಅಯ್ಯಪ್ಪ ದೇವಾಲಯ
ಅಯ್ಯಪ್ಪ ದೇವಾಲಯ
ಶಬರಿ ಮಲೈ: 31 ವರ್ಷದ ಮಹಿಳೆ ವಿಶ್ವವಿಖ್ಯಾತ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸುವುದಕ್ಕೆ ಯತ್ನಿಸಿದ್ದಾರೆ. ಅಯ್ಯಪ್ಪ ದೇವಾಲಯದಲ್ಲಿ 10-50 ವಯಸ್ಸಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 
ದೇವಾಲಯಕ್ಕೆ ಪ್ರವೇಶಿಸುತ್ತಿದ್ದ ಆಂಧ್ರಪ್ರದೇಶದ ಮಹಿಳೆಯನ್ನು ಪಥಿನೆಟ್ಟಾಂ ಪಡಿ (18 ಮೆಟ್ಟಿಲುಗಳು) ಬಳಿ ತಡೆಹಿಡಿಯಲಾಗಿದ್ದು, ವಾಪಸ್ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಯ್ಯಪ್ಪನನ್ನು ನೈಷ್ಠಿಕ ಬ್ರಹ್ಮಚಾರಿ ಎಂದು ಪರಿಗಣಿಸಲಾಗಿದ್ದು 10-50 ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. 
ಮಹಿಳೆಯ ಗುರುತಿನ ಚೀಟಿಯ ಮೂಲಕ ಆಕೆ 31 ವರ್ಷದವರೆಂದು ತಿಳಿದುಬಂದಿದ್ದು, ವಾಪಸ್ ಕಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com