ತಮಿಳುನಾಡಿನಲ್ಲಿ ಮತ್ತೆ ಐಟಿ ದಾಳಿ, 4 ಸಂಸ್ಥೆಗಳ 33 ಜಾಗಗಳಲ್ಲಿ ಶೋಧ!

ತಮಿಳುನಾಡಿನಲ್ಲಿ ಮತ್ತೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ರಾಜ್ಯದ ನಾಲ್ಕು ಪ್ರಮುಖ ವಾಣಿಜ್ಯ ಸಂಸ್ಥೆಗಳ ಒಟ್ಟು 33 ಪ್ರದೇಶಗಳ ಮೇಲೆ ದಾಳಿ ಮಾಡಿ ಶೋಧಕಾರ್ಯ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ರಾಜ್ಯದ ನಾಲ್ಕು ಪ್ರಮುಖ ವಾಣಿಜ್ಯ ಸಂಸ್ಥೆಗಳ ಒಟ್ಟು 33 ಪ್ರದೇಶಗಳ ಮೇಲೆ ದಾಳಿ ಮಾಡಿ ಶೋಧಕಾರ್ಯ ನಡೆಸಿದ್ದಾರೆ.
ಆಪರೇಷನ್ ಕ್ಲೀನ್ ಮನಿ ಎಂಬ ಹೆಸರಿನಲ್ಲಿ ಅಕ್ರಮ ಆಸ್ತಿ ಮತ್ತು ಕಪ್ಪುಹಣದ ವಿರುದ್ಧ ಐಟಿ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಮಾರ್ಗ್ ಗ್ರೂಪ್ , ಎಸ್ 2, ಮಿಲ್ಲಾನ್ ಟೆಕ್ಸ್ ಟೈಲ್ಸ್, ಗಂಗಾ ಗ್ರೂಪ್ ಎಂಬ ನಾಲ್ಕು ವಾಣಿಜ್ಯ  ಸಂಸ್ಥೆಗಳ ಎಂಬ ಖಾಸಗಿ ಸಂಸ್ಥೆಗಳ ಒಟ್ಟು 187 ಪ್ರದೇಶಗಳಲ್ಲಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ. 
ಪ್ರಮುಖವಾಗಿ ಚೆನ್ನೈ ಮತ್ತು ಮಧುರೈ ನಗರಗಳಲ್ಲಿರುವ ಮನೆ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪ್ರಸ್ತುತ ದಾಳಿಗೆ ತುತ್ತಾಗಿರುವ ಸಂಸ್ಥೆಗಳೊಂದಿಗೆ ಶಶಿಕಲಾ ಅವರ  ಸಂಬಂಧಿ ವಾಣಿಜ್ಯ ವ್ಯವಹಾರ ಹೊಂದಿದ್ದಾರೆಯಾದರೂ, ಹಾಲಿ ದಾಳಿಗೂ ಶಶಿಕಲಾ ಅವರಿಗೂ ಸಂಬಂಧವಿಲ್ಲ ಎನ್ನಲಾಗಿದೆ. ಅಂತೆಯೇ ಈ ಹಿಂದೆ ನಡೆದ ಶಶಿಕಲಾ ಅವರ ಸಂಬಂಧಿಕರ ಮೇಲಿನ ದಾಳಿಗೂ ಹಾಲಿ ದಾಳಿಗೂ  ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಆಪರೇಷನ್ ಕ್ಲೀನ್ ಮನಿ ಕಾರ್ಯಾಚರಣೆಯ ಭಾಗವಾಗಿ ಈ ನಾಲ್ಕು ಪ್ರಮುಖ ಸಂಸ್ಥೆಗಳ ವಿರುದ್ಧ ದಾಳಿ ಮಾಡಲಾಗಿದೆ ಎನ್ನಲಾಗಿದೆ. 
ಇನ್ನು ಪ್ರಸ್ತುತ ದೊರೆತಿರುವ ಮಾಹಿತಿಗಳ ಅನ್ವಯ ಮಾರ್ಗ್ ಗ್ರೂಪ್ ಸಂಸ್ಥೆ ಸಾಕಷ್ಚು ನಕಲಿ ಹೆಸರುಗಳ ಶೆಲ್ ಕಂಪನಿಗಳನ್ನು ನಡೆಸುತ್ತಿದ್ದ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ. ತೆರಿಗೆ ವಂಚನೆಗಾಗಿಯೇ  ಈ ಸಂಸ್ಥೆ ಇಂತಹ ಶೆಲ್ ಕಂಪನಿಗಳನ್ನು ಹುಟ್ಟುಹಾಕಿತ್ತು ಎನ್ನಲಾಗಿದೆ. ಇನ್ನು ರಿಯಲ್ ಎಸ್ಟೇಟ್ ಸಂಸ್ಥೆಯಾಗಿರುವ ಗಂಗಾ ಫೌಂಡೇಷನ್ ಸಂಸ್ಥೆ ನೋಟು ನಿಷೇಧ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಐಟಿ  ಅದಿಕಾರಿಗಳಿಂದ ವೀಕ್ಷಣೆಗೆ ಒಳಪಟ್ಟಿತ್ತು. ಅಂದು ಸಂಸ್ಥೆ ತೋರಿದ್ದ ಅನುಮಾನಾಸ್ಪದ ವಹಿವಾಟುಗಳೇ ಇಂದಿನ ದಾಳಿಗೆ ಕಾರಣ ಎನ್ನಲಾಗಿದೆ.
ಮತ್ತೊಂದು ರಿಯಲ್ ಎಸ್ಟೇಟ್ ಸಂಸ್ಥೆ ಮಾರ್ಗ್ ಕಂಪನಿ ವಿರುದ್ಧ ಗ್ರಾಹಕರು ಸತತ ದೂರು ನೀಡಿರುವ ಹಿನ್ನಲೆಯಲ್ಲಿ ಈ ಸಂಸ್ಥೆ ವಿರುದ್ಧ ಐಟಿ ಅಧಿಕಾರಿಗಳು ಒಂದು ಕಣ್ಣು ನೆಟ್ಟಿದ್ದರು. ಅದರ ಪರಿಣಾಮ ಎಂಬಂತೆ ಇಂದು ಈ ಸಂಸ್ಥೆಗೆ  ಸೇರಿದ ಕಚೇರಿಗಳ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಇನ್ನು ಈ ಹಿಂದೆ ಶಶಿಕಲಾ ಮತ್ತು ದಿನಕರನ್ ಅವರ ಸಂಬಂಧಿಗಳ ಮನೆ ಮೇಲೆ ನಡೆದಿದ್ದ ದಾಳಿ ವೇಳೆ ಅಧಿಕಾರಿಗಳು ಒಟ್ಟು 1,430 ರೂ. ಅಕ್ರಮ ಆಸ್ತಿಯನ್ನು ಬಯಲಿಗೆ ಎಳೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com