ನನ್ನ ಪತಿಯನ್ನು ಭೇಟಿಯಾಗುವ ಸ್ವಾತಂತ್ರ್ಯ ನನಗೆ ಬೇಕು: ಹಾದಿಯಾ

ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಕೇರಳ ಲವ್ ಜಿಹಾದ್ ಪ್ರಕರಣದ ಸಂತ್ರಸ್ಥೆ ಹಾದಿಯಾ ತನಗೆ ತನ್ನ ಪತಿಯನ್ನು ಭೇಟಿಯಾಗುವ ಸ್ವಾತಂತ್ರ್ಯ ಬೇಕು ಎಂದು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಹಾದಿಯಾ (ಸಂಗ್ರಹ ಚಿತ್ರ)
ಸುದ್ದಿಗೋಷ್ಟಿಯಲ್ಲಿ ಹಾದಿಯಾ (ಸಂಗ್ರಹ ಚಿತ್ರ)
ತಿರುವನಂತಪುರಂ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಕೇರಳ ಲವ್ ಜಿಹಾದ್ ಪ್ರಕರಣದ ಸಂತ್ರಸ್ಥೆ ಹಾದಿಯಾ ತನಗೆ ತನ್ನ ಪತಿಯನ್ನು ಭೇಟಿಯಾಗುವ ಸ್ವಾತಂತ್ರ್ಯ ಬೇಕು ಎಂದು ಹೇಳಿದ್ದಾರೆ.
ಹಾದಿಯಾ ಪ್ರಕರಣ ಸಂಬಂಧ ಹಾದಿಯಾ ಇಚ್ಛಿಸಿದ ಕಡೆಗೆ ಆಕೆ ಹೋಗಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ತನ್ನ ಪೋಷಕರಿಂದ ಬೇರ್ಪಟ್ಟಿರುವ ಹಾದಿಯಾ ಇದೀಗ ತನಗೆ ತಾನು ಪ್ರೀತಿಸಿದ ವ್ಯಕ್ತಿಯ  ಭೇಟಿಯಾಗುವ ಸ್ವಾತಂತ್ರ್ಯ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತನ್ನ ಪತಿಯನ್ನು ಭೇಟಿಯಾಗುವ ಸ್ವಾತಂತ್ರ್ಯ ನನಗೆ ಬೇಕು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹಾದಿಯಾ, "ನನಗೆ ಸ್ವಾತಂತ್ರ್ಯ ಬೇಕು... ನಾನು ಪ್ರೀತಿಸುವ ವ್ಯಕ್ತಿಯನ್ನು ಭೇಟಿಯಾಗುವ ಸ್ವಾತಂತ್ರ್ಯ ಬೇಕು. ನನಗೆ ನನ್ನ ಪತಿಯನ್ನು ಭೇಟಿಯಾಗಬೇಕಿದೆ. ನಾನು ಸ್ವಾತಂತ್ರ್ಯ ಬೇಕೆಂದು  ನ್ಯಾಯಾಲಯಕ್ಕೆ ಕೇಳಿಕೊಂಡೆ. ಆದರೆ ಇಲ್ಲಿಯ ತನಕ ನನಗೆ ಸ್ವಾತಂತ್ರ್ಯ ದೊರಕಿಲ್ಲ. ನಾನು ನನ್ನ ಮೂಲಭೂತ ಹಕ್ಕುಗಳನ್ನು ಕೇಳುತ್ತಿದ್ದೇನೆ" ಎಂದು ಹೇಳಿದ್ದಾರೆ.
"ಕಳೆದ ಆರು ತಿಂಗಳ ಕಾಲ ನಾನು ನನಗಿಷ್ಟವಿಲ್ಲದ ವ್ಯಕ್ತಿಗಳೊಂದಿಗೆ ಇದ್ದೆ.. ನನ್ನ ಹೆತ್ತ ಪೋಷಕರೇ ನನ್ನನ್ನು ಹುಚ್ಚಿ ಎಂದು ಕರೆದಿದ್ದರು. ನನ್ನ ಪತಿಯನ್ನು ಭೇಟಿಯಾಗಬೇಕು ಎಂಬ ಹೆಬ್ಬಯಕೆ ಕಾಡುತ್ತಿದೆ. ಈ ಬಗ್ಗೆ ಪ್ರಾಂಶುಪಾಲರ  ಬಳಿ ಮನವಿ ಮಾಡಿದ್ದೇನೆ.. ಅವರೂ ಕೂಡ ಅನುಮತಿ ನೀಡುವ ವಿಶ್ವಾಸವಿದೆ. ನನಗೆ ಕೇರಳ ಪೊಲೀಸರ ಭದ್ರತೆಯ ಅವಶ್ಯಕತೆ ಇಲ್ಲವಾದರೂ, ಇನ್ನೆರಡು ದಿನಗಳ ಪೊಲೀಸ್ ಭದ್ರತೆ ಮುಂದುವರೆಯುವ ಸಾಧ್ಯತೆ ಇದೆ. 
ಅಖಿಲಾ ಅಲಿಯಾಸ್ ಹಾದಿಯಾ ಸುಪ್ರೀಂ ಕೋರ್ಟಿನ ನಿರ್ದೇಶನದ ಅನ್ವಯ ಈಗ ತನ್ನ ಹೆತ್ತವರ ವಶದಿಂದ ಹೊರಕ್ಕೆ ಬಂದು ತಮಿಳುನಾಡಿನ ಸೇಲಂನ ಕಾಲೇಜೊಂದಕ್ಕೆ ಪ್ರವೇಶ ಪಡೆದಿದ್ದು, ಸೇಲಂನ ಹೋಮಿಯೋಪತಿ  ಕಾಲೇಜಿನಲ್ಲಿ ಆಕೆ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಹಾದಿಯಾಗೆ ತನ್ನ ಪತಿಯನ್ನು ಭೇಟಿಯಾಗುವ ಅವಕಾಶವಿಲ್ಲ..
ಅನುಮತಿ ಪಡೆದು ಹಾದಿಯಾ ಪತಿಯ ಭೇಟಿಯಾಗಬಹುದು: ಕಾಲೇಜು ಪ್ರಾಂಶುಪಾಲರು
ಇನ್ನು ಹಾದಿಯಾ ವ್ಯಾಸಂಗ ಮಾಡುತ್ತಿರುವ ಸೇಲಂನ ಹೋಮಿಯೋಪತಿ ಕಾಲುಜು ಪ್ರಾಂಶುಪಾಲರು ಹಾದಿಯಾ ಯಾರನ್ನು ಬೇಕಾದರೂ ಭೇಟಿಯಾಗಬಹುದು. ಆದರೆ ಆಕೆ ನನ್ನ ಅನುಮತಿ ಪಡೆಯದ ಹೊರತು ಯಾರನ್ನೂ ಭೇಟಿ  ಮಾಡುವಂತಿಲ್ಲ ಎಂದು ಸೇಲಂನ ಶಿವರಾಜ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಜಿ ಕಣ್ಣನ್ ಹೇಳಿದ್ದಾರೆ.
ಪ್ರಸ್ತುತ ಅಡ್ಮಿಷನ್ ಪ್ರಕ್ರಿಯೆ ನಡೆಯುತ್ತಿದ್ದು, ಹಾದಿಯಾ ತರಗತಿಗಳಿಗಳಲ್ಲಿ ಪಾಲ್ಗೊಳ್ಳಬಹುದು. ಸುಪ್ರೀಂ ಕೋರ್ಟ್ ನಿರ್ದೇಶನದಂತೆಯೇ ಅಖಿಲಾ ಅಶೋಕನ್ ಎಂಬ ಹಿಂದು ಹೆಸರಿನಲ್ಲೇ ಹಾದಿಯಾ ಕಾಲೇಜಿಗೆ ಸೇರಿದ್ದು, 11  ತಿಂಗಳ ಇಂಟರ್ನ್ ಶಿಪ್ ನಲ್ಲಿ ಪಾಲ್ಗೊಳ್ಳಲ್ಲಿದ್ದಾಳೆ. ಕಾಲೇಜಿನ ಮುಖ್ಯಸ್ಥರನ್ನು ಹಾದಿಯೋ ಗಾರ್ಡಿಯನ್ ಆಗಿ ಕೋರ್ಟ್ ನೇಮಿಸಿದ್ದು, ಹಾದಿಯಾ ಮೇಲ್ವಿಚಾರಣೆ ಅವರೇ ನೋಡಿಕೊಳ್ಳಲಿದ್ದಾರೆ ಎಂದು ಕಣ್ಣನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com