ಗೀತಾ ಪೋಷಕರ ಹುಡುಕಿಕೊಡುವಂತೆ ಸುಷ್ಮಾ ಸ್ವರಾಜ್ ಅವರು ಮನವಿ ಮಾಡಿಕೊಂಡಿದ್ದು, ಹೆಣ್ಣುಮಗಳೊಬ್ಬಳಿಗೆ ಆಕೆಯ ಹೆತ್ತವರನ್ನು ಹುಡುಕಿಕೊಡುವುದಕ್ಕಿಂತ ಉತ್ತಮವಾದ ಕಾರ್ಯ ಮತ್ತೊಂದಿಲ್ಲ. ಗೀತಾಳ ಕುಟುಂಬದ ಬಗ್ಗೆ ಯಾರಿಗಾದರೂ ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿ ಎಂದು ಹೇಳಿದ್ದಾರೆ.
ಕಳೆದ 2 ವರ್ಷಗಳಲ್ಲಿ ಗೀತಾ ತಮ್ಮ ಮಗಳೆಂದು ಹೇಳಿಕೊಂಡು ಸಾಕಷ್ಟು ಮಂದಿ ಬಂದಿದ್ದರು. ಆದರೆ, ಅವರಾರು ತನ್ನ ಪೋಷಕರೆಲ್ಲ ಎಂದು ಗೀತಾ ಹೇಳಿದ್ದಾಳೆ. ಇದೀಗ ಆಕೆಗೆ ಸಂಜ್ಞಾ ಭಾಷೆಯನ್ನು ಕಲಿತಿದ್ದಾಳೆ. ಕಂಪ್ಯೂಟರ್ ಹಾಗೂ ಕಸೂತಿ ಕಲೆಯನ್ನು ಕಲಿತುಕೊಂಡಿದ್ದಾಳೆ. ಕೆಲವೊಮ್ಮೆ ಆಕೆ ತನ್ನ ಕುಟುಂಬಸ್ಥರನ್ನು ನೆನೆದು ಅಳುವುದಕ್ಕೆ ಆರಂಭಿಸುತ್ತಾಳೆ.
ಆಕೆಯ ಪೋಷಕರು ಎಲ್ಲಿಯೇ ಇದ್ದರೂ, ಅಕೆಯನ್ನು ಸ್ವೀಕರಿಸಿ ಮನೆಗೆ ಕರೆದುಕೊಂಡು ಹೋಗುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಗೀತಾಳ ವಿದ್ಯಾಭ್ಯಾಸ ಹಾಗೂ ವಿವಾಹಕ್ಕೆ ಅಗತ್ಯವಿರುವ ಎಲ್ಲದನ್ನೂ ಸರ್ಕಾರವೇ ನೋಡಿಕೊಳ್ಳುತ್ತದೆ ಎಂಬುದನ್ನು ಭರವಸೆ ನೀಡುತ್ತೇನೆಂದು ತಿಳಿಸಿದ್ದಾರೆ.
2015ರ ಅಕ್ಟೋಬರ್ ನಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಮರಳಿರುವ ಗೀತಾ ಪ್ರಸ್ತುತ ಇಂದೋರ್ ನಲ್ಲಿ ಮೂಕ ಹಾಗೂ ಕಿವುಡರಿಗಾಗಿರುವ ಸಂಸ್ಥೆಯಲ್ಲಿದ್ದಾಳೆ.