ದೇಶಕ್ಕಾಗಿ ಮಡಿದ ಯೋಧರ ಮೃತದೇಹ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿದ್ದಕ್ಕೆ ಆಕ್ರೋಶ
ದೇಶಕ್ಕಾಗಿ ಮಡಿದ ಯೋಧರ ಮೃತದೇಹ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿದ್ದಕ್ಕೆ ಆಕ್ರೋಶ

ದೇಶಕ್ಕಾಗಿ ಮಡಿದ ಯೋಧರ ಮೃತದೇಹ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿದ್ದಕ್ಕೆ ಆಕ್ರೋಶ

ತವಾಂಗ್ ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ 7 ಮಂದಿ ಯೋಧರ ಮೃತ ದೇಹಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ರಟ್ಟಿನ ಬಾಕ್ಸ್'ನಲ್ಲಿ ಹಾಕಿದ ಘಟನೆ ನಡೆದಿದೆ...
ನವದೆಹಲಿ: ತವಾಂಗ್ ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ 7 ಮಂದಿ ಯೋಧರ ಮೃತ ದೇಹಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ರಟ್ಟಿನ ಬಾಕ್ಸ್'ನಲ್ಲಿ ಹಾಕಿದ ಘಟನೆ ನಡೆದಿದೆ. 
ಇದೋ ನೋಡಿ ದೇಶಕ್ಕಾಗಿ ಮಡಿದ ಯೋಧರಿಗೆ ಸಿಗುವ ಗೌರವ ಎಂದು ಈ ಫೋಟೋಗಳನ್ನು ಉತ್ತರ ಸೇನಾ ಕಮಾಂಡರ್ ಲೆ.ಜ.(ನಿವೃತ್ತ) ಹೆಚ್.ಎಸ್. ಪನಾಗ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದರು. 
ಇದೀಗ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೇನೆ, ಸ್ಥಳೀಯವಾಗಿ ಸಿಕ್ಕಿರುವ ಸಂಪನ್ಮೂಲದಿಂದ ಮೃತದೇಹಗಳನ್ನು ಸುತ್ತಲಾಗಿತ್ತು. ಅಪಘಾತದಲ್ಲಿ ಮಡಿದ ಯೋಧರಿಗೆ ಸಕಲ ಸೇನಾ ಗೌರವಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ. 
ಸಮುದ್ರ ಮಟ್ಟದಿಂದ 17000 ಎತ್ತರದಲ್ಲಿ ಅಷ್ಟೊಂದು ಶವಪೆಟ್ಟಿಗಗಳನ್ನು ಹೊತ್ತುಕೊಂಡು ಹಾರಲು ಹೆಲಿಕಾಪ್ಟರ್'ಗೆ ಸಾಧ್ಯವಿಲ್ಲ. ಹೀಗಾಗಿ ರಟ್ಟಿನ ಪೆಟ್ಟಿಗೆ ಬಳಸಲಾಗಿದೆ. ತವಾಂಗ್ ನಂತಹ ದೂರದ ಪ್ರದೇಶದಲ್ಲಿ ಅತ್ಯಗತ್ಯ ವಸ್ತುಗಳನ್ನು ಮಾತ್ರವೇ ಇರಿಸಲಾಗುತ್ತದೆ. ಬಾಡಿ ಬ್ಯಾಗ್ ಗಳ ವ್ಯವಸ್ಥೆ ಸುಸಜ್ಜಿತ ಮಿಲಿಟರಿ ಕೇಂದ್ರಗಳಲ್ಲಿ ಮಾತ್ರ ಇರುತ್ತದೆ ಎಂದು ತಿಳಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com