ಮಹಿಳೆಗೆ ರೂ.1 ವೈದ್ಯಕೀಯ ಸೇವೆ, ಮುಂಬೈ ರೈಲು ನಿಲ್ದಾಣದಲ್ಲಿ 'ಹೆಣ್ಣು ಮಗುವಿಗೆ ಜನ್ಮ'
ರೂ.1 ವೈದ್ಯಕೀಯ ಸೇವೆಯಂತೆ ರೈಲ್ವೇ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡಲಾಗಿದ್ದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಸೋಮವಾರ...
ಮಹಿಳೆಗೆ ರೂ.1 ವೈದ್ಯಕೀಯ ಸೇವೆ, ಮುಂಬೈ ರೈಲು ನಿಲ್ದಾಣದಲ್ಲಿ 'ಹೆಣ್ಣು ಮಗುವಿಗೆ ಜನ್ಮ'
ಮುಂಬೈ: ರೂ.1 ವೈದ್ಯಕೀಯ ಸೇವೆಯಂತೆ ರೈಲ್ವೇ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡಲಾಗಿದ್ದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಸೋಮವಾರ ನಡೆದಿದೆ.
ಮುಂಬೈನ ದಾದರ್ ರೈಲ್ವೇ ನಿಲ್ದಾಣದಲ್ಲಿ ಸಲ್ಮಾ ಶೇಖ್ (26) ಎಂಬ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಕೂಡಲೇ ಸ್ಥಳಕ್ಕೆ ಬಂದ ವೈದ್ರರು ರೂ.1 ವೈದ್ಯಕೀಯ ಸೇವೆಯಂತೆ ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ. ಮಹಿಳೆ ಹೆಣ್ಣು ಮಗವಿಗೆ ಜನ್ಮ ನೀಡಿದ್ದು, ಪ್ರಸ್ತುತ ತಾಯಿ, ಮಗು ಆರೋಗ್ಯಕವಾಗಿದ್ದಾರೆ.
ಮಹಿಳೆ ಜನ್ಮ ನೀಡಿದ ಬಳಿಕ ತಾಯಿ ಹಾಗೂ ಮಗುವನ್ನು ಹತ್ತಿರದಲ್ಲಿರುವ ಕೆಇಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.