ಸ್ವತಃ ಶ್ರೀಲಂಕಾದ ವಿಮಾನಯಾನ ಸಚಿವ ನಿಮಾಲ್ ಸಿರಿಪಾಲ ಈ ಬಗ್ಗೆ ಮಾಹಿತಿ ನೀಡಿದ್ದು, ಚೀನಾ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಡಿಯಲ್ಲಿ ಹಂಬಂತೊತಾ ಬಂದರು ಪ್ರದೇಶದಲ್ಲಿ ಹೂಡಿಕೆ ಜೋನ್ ನಿರ್ಮಿಸಿ ಹೆಚ್ಚು ಹೂಡಿಕೆ ಮಾಡಿದೆ. ಆದರೆ ಹಂಬಂತೊತಾ ಬಂದರು ಪ್ರದೇಶದಲ್ಲಿ ಹೂಡಿಕೆಗಾಗಿ ಪರ್ಯಾಯ ಹೂಡಿಕೆದಾರರನ್ನು ಎದುರುನೋಡುತ್ತಿತ್ತು, ಈ ವೇಳೆ ಭಾರತ ಪ್ರಸ್ತಾವನೆ ಸಲ್ಲಿಸಿದ್ದು, ಜಂಟಿ ವಿಮಾನ ನಿಲ್ದಾಣ ನಿರ್ವಹಣೆ, ವೈಮಾನಿಕ ಸೇವೆಗಳಿಗೆ ಸಿದ್ದವಿರುವುದಾಗಿ ಭಾರತ ಹೇಳಿದೆ ಎಂದು ಸಚಿವರು ತಿಳಿಸಿದ್ದಾರೆ.