ಕಳವಾಗಿದ್ದ ದೆಹಲಿ ಸಿಎಂ ಖಾಸಗಿ ಕಾರು ಘಜಿಯಾಬಾದ್ನಲ್ಲಿ ಪತ್ತೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಳವಾಗಿದ್ದ ಖಾಸಗಿ ಕಾರು ಘಜಿಯಾಬಾದ್ ನಲ್ಲಿ ಪತ್ತೆಯಾಗಿದೆ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on: 
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಳವಾಗಿದ್ದ ಖಾಸಗಿ ಕಾರು ಘಜಿಯಾಬಾದ್ ನಲ್ಲಿ ಪತ್ತೆಯಾಗಿದೆ. 
ಅರವಿಂದ್ ಕೇಜ್ರಿವಾಲ್ ಅವರ ಬ್ಲೂ ವ್ಯಾಗನ್ ಆರ್ ಕಾರು ಗುರುವಾರ ಮಧ್ಯಾಹ್ನ ದೆಹಲಿಯ ಸಚಿವಾಲಯದ ಮುಂಭಾಗದಿಂದಲೇ ಕಳ್ಳತನವಾಗಿತ್ತು. ಈ ಪ್ರಕರಣ ಕುರಿತಂತೆ ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆ ಹಾಕಿ ತನಿಖೆ ಕೈಗೊಂಡಿದ್ದರು. ಸದ್ಯ ಕಾರು ಘಜಿಯಾಬಾದ್ ನಲ್ಲಿ ಪತ್ತೆಯಾಗಿರುವುದರಿಂದ ಘಜಿಯಾಬಾದ್ ಪೊಲೀಸರ ಜತೆ ಸಂಪರ್ಕದಲ್ಲಿರುವ ದೆಹಲಿ ಪೊಲೀಸರು ಪತ್ತೆಯಾಗಿರುವ ಕಾರು ದೆಹಲಿ ಮುಖ್ಯಮಂತ್ರಿಗಳದ್ದೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. 
ಆಮ್ ಆದ್ಮಿ ಪಕ್ಷದ ಯುವ ಮುಖಂಡರೊಬ್ಬರು ಕಾರನ್ನು ಬಳಸುತ್ತಿದ್ದಾಗ ಕಾರು ಕಳುವಾಗಿದೆ. ಕೇಜ್ರಿವಾಲ್ ಅವರಿಗೆ ಈ ಕಾರು ಬಳುವಳಿಯಾಗಿ ಬಂದಿತ್ತು. ಕೇಜ್ರಿವಾಲ್ ಕಾರು ಸೇರಿದಂತೆ ಈ ವರ್ಷದಲ್ಲಿ ದೆಹಲಿಯಲ್ಲಿ ಸರಿಸುಮಾರು 30,449 ವಾಹನಗಳು ಕಳವಾಗಿವೆ. ದೆಹಲಿ ಚುನಾವಣೆಗೂ ಮುನ್ನ ಕೇಜ್ರಿವಾಲ್ ಅವರು ಈ ಕಾರನ್ನು ಬಳಸುತ್ತಿದ್ದರು. ನಂತರ ದೆಹಲಿ ಮುಖ್ಯಮಂತ್ರಿಯಾದ ಬಳಿಕ ಈ ಕಾರನ್ನು ರಹಟಕ್ ಅಭ್ಯರ್ಥಿ ನವೀನ್ ಜೈಹಿಂದ್ ಗೆ ಪ್ರಚಾರಕ್ಕಾಗಿ ಈ ಕಾರನ್ನು ನೀಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com