500 ರೂಗಳಿಗೆ ಭಾರತೀಯರ ಬ್ಯಾಂಕ್ ವಿವರ ಆನ್ ಲೈನ್ ನಲ್ಲಿ ಮಾರಾಟಕ್ಕೆ ಲಭ್ಯ!

ಭಾರತೀಯರ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಟ್, ಸಿವಿವಿ ನಂಬರ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳು, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ಇವೆಲ್ಲವೂ ಕೇವಲ 500 ರೂಪಾಯಿಗಳಿಗೆ ಡಾರ್ಕ್ ವೆಬ್
ಬ್ಯಾಂಕ್ ವಿವರ
ಬ್ಯಾಂಕ್ ವಿವರ
ಇಂದೋರ್: ಭಾರತೀಯರ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಟ್, ಸಿವಿವಿ ನಂಬರ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳು, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ಇವೆಲ್ಲವೂ ಕೇವಲ 500 ರೂಪಾಯಿಗಳಿಗೆ ಡಾರ್ಕ್ ವೆಬ್ ನಲ್ಲಿ ಮಾರಾಟಕ್ಕೆ ಲಭ್ಯವಾಗುತ್ತಿದೆ ಎಂಬ ಅಘಾತಕಾರಿ ಅಂಶವನ್ನು ಮಧ್ಯಪ್ರದೇಶ ಸೈಬರ್ ಸೆಲ್ ಪೊಲೀಸರು ಬಹಿರಂಗಗೊಳಿಸಿದ್ದಾರೆ. 
ಇಂದೋರ್ ನಲ್ಲಿ ಬ್ಯಾಂಕ್ ಮಾಹಿತಿಯನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, ಪಾಕಿಸ್ತಾನದ ವ್ಯಕ್ತಿ ನೇತೃತ್ವ ವಹಿಸಿದ್ದ ತಂಡ ಲಾಹೋರ್ ನಿಂದ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ. 
ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಗ್ರಾಹಕರ ಸೋಗಿನಲ್ಲಿ ಹೋಗಿ ಬಿಟ್ ಕಾಯಿನ್ ಬದಲಾಗಿ ಇಂದೋರ್ ಮಹಿಳೆಯೊಬ್ಬರ ಡೆಬಿಟ್ ಕಾರ್ಡ್ ಮಾಹಿತಿಯನ್ನು ಪಡೆದಿದ್ದರು. ಈ ಕಾರ್ಯಾಚರಣೆ ಮುಂಬೈ ನಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲು ಸಹಕಾರಿಯಾಗಿತ್ತು. 
ಜಯ್ ಕಿಶನ್ ಗುಪ್ತಾ ಎಂಬುವವರು 72,401 ರೂಪಾಯಿಗಳನ್ನು ಡೆಬಿಟ್ ಕಾರ್ಡ್ ನಿಂದ ದೋಚಲಾಗಿದೆ ಎಂದು ಆ.28 ರಂದು ದೂರು ನೀಡಿದ ನಂಟರ ಮಧ್ಯಪ್ರದೇಶ ಸೈಬರ್ ಸೆಲ್ ಈ ಪ್ರಕರಣದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿತ್ತು. ಡೆಬಿಟ್ ಕಾರ್ಡ್ ಮಾಹಿತಿಯನ್ನು ನೀಡುವ ಅಂತಾರಾಷ್ಟ್ರೀಯ ತಂಡ ಒಪಿಟಿ ಅಗತ್ಯವಿಲ್ಲದ ಅಂತಾರಾಷ್ಟ್ರೀಯ ವೆಬ್ ಸೈಟ್ ಗಳನ್ನು ಬಳಕೆ ಮಾಡುತ್ತಿತ್ತು ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com